ನವದೆಹಲಿ: ಪದವಿಪೂರ್ವ ಕೋರ್ಸ್‌ಗಳಿಗೆ 12 ಭಾಷೆಗಳಲ್ಲಿ ಪಠ್ಯಪುಸ್ತಕ ಬರೆಯಲು ಲೇಖಕರು, ವಿಮರ್ಶಕರು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕವರ್ಗಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಆಹ್ವಾನ ನೀಡಿದೆ.
ಕನ್ನಡ, ಅಸ್ಸಾಂ, ಬಂಗಾಳಿ, ಗುಜರಾತಿ, ಹಿಂದಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪುಸ್ತಕ ಬರೆಯಲು ಆಯೋಗ ಅರ್ಜಿ ಆಹ್ವಾನಿಸಿದೆ.
‘ಆಸಕ್ತ ಲೇಖಕರು ಅರ್ಜಿ ಸಲ್ಲಿಸಲು ಜ.30ರವರೆಗೆ ಸಮಯಾವಕಾಶ ಇದೆ. ಅರ್ಜಿಯಲ್ಲಿ, ವೈಯಕ್ತಿಕ ಮಾಹಿತಿ ಜೊತೆಗೆ ಯಾವ ಕೋರ್ಸ್ ಮತ್ತು ಯಾವ ಭಾಷೆಯಲ್ಲಿ ಪಠ್ಯ ಪುಸ್ತಕ ಬರೆಯಲು ಇಚ್ಛಿಸುತ್ತಾರೆ ಎಂದೂ ತಿಳಿಸಬೇಕು’ ಎಂದು ಯುಜಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಸಮಾಜವಿಜ್ಞಾನ ವಿಷಯ ಕುರಿತ ಪದವಿಪೂರ್ವ ಕೋರ್ಸ್‌ಗಳಿಗೆ 12 ಭಾಷೆಗಳಲ್ಲಿ ಪಠ್ಯಪುಸ್ತಕ ಒದಗಿಸಲು ಯುಜಿಸಿ ಕಾರ್ಯತತ್ಪರವಾಗಿದೆ. ಇದಕ್ಕಾಗಿ ಲೇಖಕರ ತಂಡಗಳನ್ನು ರಚನೆ ಮಾಡಲು ಸಹಕಾರ ನೀಡುವ ನೋಡಲ್ ವಿಶ್ವವಿದ್ಯಾಲಯಗಳನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.