ADVERTISEMENT

ಎನ್‌ಇಟಿ ಪಠ್ಯಕ್ರಮ ಬದಲಾವಣೆಗೆ ಯುಜಿಸಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
   

ನವದೆಹಲಿ: ಶೀಘ್ರವೇ, ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಯುಜಿಸಿ–ಎನ್‌ಇಟಿ ಪಠ್ಯಕ್ರಮ ಬದಲಾವಣೆಯಾಗಲಿದೆ. 

ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಉನ್ನತ ಶಿಕ್ಷಣ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧರಿಸಲಾಗಿದೆ. ಹೊಸ ಪಠ್ಯಕ್ರಮ ರಚನೆಗೆ ಸಂಬಂಧಿಸಿ ಮಂಡಳಿಯು ಪರಿಣತರ ಸಮಿತಿ ರಚಿಸಲಿದೆ.

‘2017ರಲ್ಲಿ ಎನ್‌ಇಟಿ ಪಠ್ಯಕ್ರಮವು ಪರಿಷ್ಕರಣೆಯಾಗಿತ್ತು. ಹೊಸ ಪಠ್ಯಕ್ರಮದ ಅನುಷ್ಠಾನಕ್ಕೂ ಮೊದಲು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಾಕಷ್ಟು ಸಮಯಾವಕಾಶ ನೀಡಲಾಗುವುದು. ಹಾಗಾಗಿ, ಈ ಬದಲಾವಣೆಯು ಸರಾಗವಾಗಿ ನಡೆಯಲಿದೆ’ ಎಂದು ಮಂಡಳಿಯ ಮುಖ್ಯಸ್ಥ ಎಂ. ಜಗದೇಶ್ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.