ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತ ಅವಘಡ ಸಂಬಂಧಿಸಿದಂತೆ ರಕ್ಷಣಾ ಕಾರ್ಯ 15 ನೇ ದಿನವೂ ಮುಂದುವರಿದಿದ್ದು, ಶನಿವಾರ ತಪೋವನ–ವಿಷ್ಣುಗಡ್ ಯೋಜನೆಯ ಸ್ಥಳದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದೆ.
‘ಶನಿವಾರ ಸಂಜೆ ಮೂರು ಶವಗಳು ಪತ್ತೆಯಾಗಿತ್ತು. ರಾತ್ರಿ ವೇಳೆಗೆ ಇನ್ನೂ ಎರಡು ಶವಗಳು ಸಿಕ್ಕಿವೆ. ಈ ಮೂಲಕ ಮೃತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. 137 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಫೆಬ್ರುವರಿ 7 ರಂದು ಚಮೋಲಿ ಜಿಲ್ಲೆಯ ರಿಷಿ ಗಂಗಾದ ಬಳಿ ನೀರ್ಗಲ್ಲು ಕುಸಿತ ಸಂಭವಿಸಿದೆ. ಇದರಿಂದಾಗಿ ಸಂಭವಿಸಿದ ಪ್ರವಾಹದಲ್ಲಿ 13.2 ಮೆಗಾವಾಟ್ ಸಾಮರ್ಥ್ಯದ ರಿಷಿ ಗಂಗಾ ಜಲವಿದ್ಯುತ್ ಯೋಜನೆಯು ಸಂಪೂರ್ಣ ನಾಶಗೊಂಡಿದೆ. ತಪೋವನ–ವಿಷ್ಣುಗಡ್ ಯೋಜನೆಗೂ ಭಾರಿ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.