ADVERTISEMENT

ಸಹೋದರಿ ವಿವಾಹ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 11:33 IST
Last Updated 23 ಡಿಸೆಂಬರ್ 2022, 11:33 IST
ಉಮರ್ ಖಾಲಿದ್‌
ಉಮರ್ ಖಾಲಿದ್‌   

ನವದೆಹಲಿ:2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿಯಾಗಿರುವ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಯಾಗಿದ್ದ ಉಮರ್ ಖಾಲಿದ್‌ ಅವರನ್ನುವಾರದ ಅವಧಿಗೆ ಮಧ್ಯಂತರ ಜಾಮೀನು ಮೇಲೆ ಶುಕ್ರವಾರ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಅವರ ಸಹೋದರಿ ವಿವಾಹ ನಿಮಿತ್ತ ಬಿಡುಗಡೆ ಮಾಡಲಾಗಿದೆ.

ಎರಡು ವಾರದ ಅವಧಿಗೆ ಜಾಮೀನು ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಅಮಿತಾಬ್‌ ರಾವತ್‌ ಅವರು, ಡಿಸೆಂಬರ್ 30ರ ವರೆಗೆ ಮಧ್ಯಂತರ ಜಾಮೀನಿಗೆ ಅನುಮತಿ ನೀಡಿದ್ದಾರೆ.

ದೆಹಲಿಯ ಈಶಾನ್ಯಭಾಗದಲ್ಲಿ 2020ರಲ್ಲಿ ನಡೆಸಲಾಗಿದ್ದಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಈ ಗಲಭೆಯಲ್ಲಿ 53 ಜನ ಮೃತರಾಗಿದ್ದು, 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಗಲಭೆಗೆ ಮೂಲ ಕಾರಣಕರ್ತ ಉಮರ್‌ ಎಂಬ ಆರೋಪದಡಿ 2020ರ ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರು ಉಮರ್‌ ಅವರನ್ನು ಬಂಧಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.