ADVERTISEMENT

ಕಾಂಗ್ರೆಸ್ ಆಡಳಿತದಲ್ಲಿ ಭಿಕ್ಷುಕರಾದ ಮಾಲೀಕರು: ರಾಜಸ್ಥಾನ ಸಿಎಂ

ಪಿಟಿಐ
Published 9 ನವೆಂಬರ್ 2024, 14:14 IST
Last Updated 9 ನವೆಂಬರ್ 2024, 14:14 IST
<div class="paragraphs"><p>ಭಜಲ್‌ ಲಾಲ್ ಶರ್ಮಾ</p></div>

ಭಜಲ್‌ ಲಾಲ್ ಶರ್ಮಾ

   

ಪಿಟಿಐ

ಜೈಪುರ: ‘ಹಿಂದಿನ 70 ವರ್ಷಗಳಲ್ಲಿ ಹೆಚ್ಚಿನ ಸಮಯ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷವು, ಮಾಲೀಕರಂತೆ ಇದ್ದವರನ್ನೆಲ್ಲ ಭಿಕ್ಷುಕರಂತೆ ಮಾಡಿದೆ. ಹಾಗೆಯೇ, ಭಿಕ್ಷುಕರಂತೆ ಇದ್ದವರು ಸಮೃದ್ಧಿ ಗಳಿಸುವಂತೆ ಮಾಡಿದೆ' ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಆರೋಪಿಸಿದರು.

ADVERTISEMENT

ಝುಂಝುನು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಶರ್ಮಾ ಅವರು, ‘ದೇಶದ ಒಡೆಯರಾದ ನೀವು ಈಗಲೇ ಎಚ್ಚೆತ್ತುಕೊಂಡು ಯಾರು ನಿಮ್ಮ ಏಳಿಗೆಯನ್ನು ಬಯಸುತ್ತಾರೆ ಎಂಬುವುದನ್ನು ಗುರುತಿಸಬೇಕಿದೆ’ ಎಂದರು.

‘ಕಾಂಗ್ರೆಸ್‌ ಪಕ್ಷವು ಚುನಾವಣೆ ಬಂದಾಗಲೆಲ್ಲ ಸುಳ್ಳುಗಳನ್ನು ಹರಡಲು ಪ್ರಾರಂಭಿಸುತ್ತದೆ. ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ’ ಎಂದು ದೂರಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 11 ತಿಂಗಳು ಕಳೆದಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವತ್ತ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ನಮ್ಮ ಸರ್ಕಾರ, ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಿದೆ. ಪ್ರಕರಣದಲ್ಲಿ ಈವರೆಗೆ 200 ಜನರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.