ADVERTISEMENT

ಪ್ರತಿನಿಧಿ ನೇಮಕ: ಸಂಸದ ಸನ್ನಿ ಡಿಯೋಲ್‌ ವಿರುದ್ಧ ಟೀಕೆ

ಸಭೆಗಳಿಗೆ ಹಾಜರಾಗಲು ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 20:15 IST
Last Updated 2 ಜುಲೈ 2019, 20:15 IST
ಸನ್ನಿ ಡಿಯೋಲ್‌
ಸನ್ನಿ ಡಿಯೋಲ್‌   

ಗುರದಾಸಪುರ: ಸಂಸದ ಮತ್ತು ನಟ ಸನ್ನಿ ಡಿಯೋಲ್‌ ಅವರು ತಮ್ಮ ಕ್ಷೇತ್ರದ ಉಸ್ತುವಾರಿಗೆ ಪ್ರತಿನಿಧಿಯೊಬ್ಬರನ್ನು ನೇಮಿಸಿರುವುದು ವಿವಾದ ಸೃಷ್ಟಿಸಿದೆ.

‘ಸಭೆಗಳಿಗೆ ಹಾಜರಾಗಲು ಮತ್ತು ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲು ಗುರ್‌ಪ್ರೀತ್‌ಸಿಂಗ್‌ ಪಲ್ಹೇರಿ ಅವರನ್ನು ನೇಮಿಸಿದ್ದೇನೆ’ ಎಂದು ಸನ್ನಿ ಡಿಯೋಲ್‌ ಸಹಿ ಮಾಡಿರುವ ಅಧಿಕೃತ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಲೇಖಕ ಮತ್ತು ನಿರ್ಮಾಪಕರಾಗಿರುವ ಪಲ್ಹೇರಿ ಅವರು ಸನ್ನಿ ಡಿಯೋಲ್‌ ಅವರಿಗೆ ಆಪ್ತರಾಗಿದ್ದಾರೆ. ಜೂನ್‌ 26ರಂದು ಪಲ್ಹೇರಿ ಅವರಿಗೆ ನೇಮಕದ ಪತ್ರ ನೀಡಲಾಗಿದೆ.

ADVERTISEMENT

ಡಿಯೋಲ್‌ ತಮ್ಮ ಕೆಲಸವನ್ನು ಹೊರಗುತ್ತಿಗೆ ನೀಡಿದ್ದಾರೆ ಎಂದು ರಾಜಕೀಯ ಮುಖಂಡರು ಟೀಕಿಸಿದ್ದಾರೆ.‘ಜನ ಸೇವೆ ಮಾಡಲು ಬಿಜೆಪಿ ಹೊಸ ಪದ್ಧತಿ ಅನುಸರಿಸುತ್ತಿದೆ. ಇದು ಮತದಾರರಿಗೆ ಮಾಡಿದ ನಂಬಿಕೆದ್ರೋಹದ ಕೆಲಸವಾಗಿದ್ದರಿಂದ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಕರ್ನಾಟಕ ಘಟಕ ಒತ್ತಾಯಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಯೋಲ್‌, ‘ಇದೊಂದು ಅನಗತ್ಯ ವಿವಾದ. ಗುರುದಾಸಪುರದಿಂದ ನಾನು ಹೊರಗಿದ್ದಾಗ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯಲು ಈ ನೇಮಕ ಮಾಡಲಾಗಿದೆ’ ಎಂದು ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.