ADVERTISEMENT

ಇಂದೋರ್ ಕಾಂಗ್ರೆಸ್ ಅಭ್ಯರ್ಥಿ ಹಿಂದಕ್ಕೆ: ಕೇಳಿರದ ಘಟನೆಗಳು ನಡೆಯುತ್ತಿವೆ– ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮೇ 2024, 14:17 IST
Last Updated 10 ಮೇ 2024, 14:17 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಮಧ್ಯಪ್ರದೇಶದ ಇಂದೋರ್‌ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಪರ್ಯಾಯ ಅಭ್ಯರ್ಥಿಯಾಗಿ ಪರಿಗಣಿಸಬೇಕು ಎಂದು ಮೋತಿ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಸುಪ್ರೀಂ ಕೋರ್ಟ್‌ ನಿಕಾಕರಿಸಿದೆ.

ಈ ಬಗ್ಗೆ ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ.

‘ಚುನಾವಣಾ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿವೆ. ಆದರೆ ಅರ್ಜಿಯಲ್ಲಿ ಚುನಾವಣೆಯ ನಿಯಮಗಳನ್ನು ಪ್ರಶ್ನೆ ಮಾಡಿರುವುದನ್ನು ವಿಚಾರಣೆಗೆ ಮುಕ್ತವಾಗಿರಿಸಲಿದ್ದೇವೆ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಕೆ.ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿತು.

ADVERTISEMENT

‘ಇವಿಎಂಗಳು ಹಾಗೂ ಚಿಹ್ನೆಗಳನ್ನು ಈಗಾಗಲೇ ಹಂಚಿಕೆಯಾಗಿದೆ. ನಮ್ಮಲ್ಲಿಗೆ ಬರಲು ಇಷ್ಟು ತಡವೇಕೆ ಮಾಡಿದಿರಿ? ಈವರೆಗೂ ಕೇಳಿರದ ಸಂಗತಿಗಳೆಲ್ಲಾ ನಡೆಯುತ್ತಿವೆ. ನೀವು ಬೇಗ ಬರಬೇಕಿತ್ತು. ತಾತ್ಕಾಲಿಕ ನಾಮಪತ್ರ ಸಲ್ಲಿಸಲು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿ, ಅಲ್ಲಿ ಮಾನ್ಯ ಮಾಡದಿದ್ದರೆ, ನೀವು ಇಲ್ಲಿಗೆ ಬರಬಹುದಿತ್ತು’ ಎಂದಿತು.

‘ಅರ್ಜಿಯಲ್ಲಿ ಕಾನೂನಿನ ಪ್ರಶ್ನೆಯನ್ನು ಎತ್ತಬಹುದು. ನಾವು ಅದನ್ನು ವಿಚಾರಣೆಗೆ ಮುಕ್ತವಾಗಿರಿಸುತ್ತೇವೆ’ ಎಂದು ಕೋರ್ಟ್’ ಹೇಳಿದೆ.

ಮಧ್ಯಪ್ರದೇಶದ ಇಂದೋರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ಏ.29ರಂದು ನಾಮಪತ್ರ ವಾಪಸ್‌ ಪಡೆದು ಬಿಜೆಪಿ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.