ADVERTISEMENT

ಮಧ್ಯಂತರ ಬಜೆಟ್‌ 2019: ರಕ್ಷಣಾ ವೆಚ್ಚ ₹3 ಲಕ್ಷ ಕೋಟಿಗೆ ಏರಿಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 7:41 IST
Last Updated 2 ಜುಲೈ 2019, 7:41 IST
   

ನವದೆಹಲಿ: ದೇಶದ ಬಜೆಟ್‌ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ರಕ್ಷಣಾ ಕ್ಷೇತ್ರಕ್ಕೆ₹ 3 ಲಕ್ಷ ಕೋಟಿಅನುದಾನ ಘೋಷಣೆ ಮಾಡಲಾಗಿದೆ.

2019-20 ಸಾಲಿಗೆ ರಕ್ಷಣಾ ವೆಚ್ಚಕ್ಕೆ ಇಷ್ಟೊಂದು ಹಣವನ್ನು ಮೀಸಲು ಇಟ್ಟಿರುವುದು ಇದೇ ಮೊದಲು. ಹಣಕಾಸುಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿಯಲ್ಲಿ ಪೀಯೂಷ್ ಗೋಯಲ್ಬಜೆಟ್ ಮಂಡನೆ ಮಾಡಿದರು. ಈ ವೇಳೆಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಯೋಧರೇ ನಮ್ಮ ಘನತೆ ಮತ್ತುಹೆಮ್ಮೆ ಎಂದು ಬಣ್ಣಿಸಿದರು.

ರಕ್ಷಣಾ ಕ್ಷೇತ್ರವನ್ನು ಬಲಪಡಿಸಲು ಮತ್ತು ಸುಧಾರಣೆಗೊಳಿಸಲು ಪ್ರಸಕ್ತ ಸಾಲಿಗೆ₹ 3 ಲಕ್ಷ ಕೋಟಿ ಬಿಡುಗಡೆ ಮಾಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅನುದಾನ ಘೋಷಿಸುವುದಾಗಿ ಗೋಯಲ್ ಹೇಳಿದ್ದಾರೆ.

ADVERTISEMENT

ಒಂದೇ ಶ್ರೇಣಿ, ಒಂದೇ ಪಿಂಚಣಿ ಯೋಜನೆಗೆ ಈಗಾಗಲೇ ₹ 35 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಗೆಗಾಗಿ ಕಾಂಗ್ರೆಸ್‌ ಸರ್ಕಾರ ಕೇವಲ ₹500 ಕೋಟಿಗಳನ್ನು ತೆಗೆದಿರಿಸಿದ್ದರೂಅದನ್ನು ಜಾರಿ ಮಾಡಿರಲಿಲ್ಲ. 40 ವರ್ಷಗಳ ಬಳಿಕ ಮೋದಿ ಸರ್ಕಾರ ಈ ಸಮಸ್ಯೆಯನ್ನು ನಿವಾರಿಸಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು.

ನಮ್ಮ ರಕ್ಷಣಾ ಬಲವನ್ನು ಹೆಚ್ಚಿಸಿಕೊಳ್ಳಬೇಕಿರುವಜೊತೆಗೆ ದೇಶದ ಭದ್ರತೆಗೂ ಆದ್ಯತೆ ನೀಡಬೇಕಾಗಿದೆ. ದೇಶದ ಗಡಿ ಕಾಯುವಸೈನಿಕರ ರಕ್ಷಣೆಯು ಸರ್ಕಾರದ ಕರ್ತವ್ಯವಾಗಿದೆ. ಯೋಧರುಮತ್ತು ಮಾಜಿ ಯೋಧರ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಗೋಯಲ್‌ ಹೇಳೀದರು.

ಇವನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.