ನವದೆಹಲಿ: ಈಗಾಗಲೇ ಜಾರಿಯಲ್ಲಿ ಇರುವ ಐದು ಉಪಯೋಜನೆಗಳನ್ನು ಒಳಗೊಳ್ಳುವ ‘ಪೃಥ್ವಿ ವಿಜ್ಞಾನ’ ಹೆಸರಿನ ಸಮಗ್ರ ಯೋಜನೆಯೊಂದಕ್ಕೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ ಅನುಮೋದನೆ ನೀಡಿದೆ. ಈ ಯೋಜನೆಗೆ 2021ರಿಂದ ಅನ್ವಯವಾಗುವಂತೆ 2026ರವರೆಗೆ ₹4,797 ಕೋಟಿ ವೆಚ್ಚವಾಗಲಿದೆ.
ಉಪ ಯೋಜನೆಗಳನ್ನು ಒಂದುಗೂಡಿಸಲು ಭೂವಿಜ್ಞಾನ ಸಚಿವಾಲಯ ಮುಂದಿರಿಸಿದ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಒಪ್ಪಿಗೆ ನೀಡಿತು. ಪೃಥ್ವಿ ವಿಜ್ಞಾನ ಯೋಜನೆಯು ಏಕೀಕೃತ ಬಹುಶಿಸ್ತೀಯ ಭೂವಿಜ್ಞಾನ ಸಂಶೋಧನೆಗೆ ಅನುವು ಮಾಡಿಕೊಡಲಿದೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.
ಹವಾಮಾನ, ಸಮುದ್ರ, ನೀರು ಹೆಪ್ಪುಗಟ್ಟಿರುವ ಸ್ಥಳಗಳು, ಭೂಕಂಪನ ವಿಜ್ಞಾನಕ್ಕೆ ಸಂಬಂಧಿಸಿದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಸಂಶೋಧನೆಗಳು ನೆರವು ನೀಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.