ADVERTISEMENT

ತ್ರಿಪುರಾ: ಬಂಡುಕೋರ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದ

ಪಿಟಿಐ
Published 4 ಸೆಪ್ಟೆಂಬರ್ 2024, 11:14 IST
Last Updated 4 ಸೆಪ್ಟೆಂಬರ್ 2024, 11:14 IST
<div class="paragraphs"><p>ಅಮಿತ್ ಶಾ </p></div>

ಅಮಿತ್ ಶಾ

   

–ಪಿಟಿಐ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ಹಾಗೂ ತ್ರಿಪುರಾ ಸರ್ಕಾರದೊಂದಿಗೆ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌ ಆಫ್‌ ತ್ರಿಪುರಾ (ಎನ್‌ಎಲ್‌ಎಫ್‌ಟಿ) ಹಾಗೂ ಆಲ್‌ ತ್ರಿಪುರಾ ಟೈಗರ್‌ ಫೋರ್ಸ್‌ (ಎಟಿಟಿಎಫ್‌) ಎಂಬ ಎರಡು ಬಂಡುಕೋರ ಸಂಘಟನೆಗಳು ಶಾಂತಿ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದವು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ನಂಬಿಕೆ ಇರಿಸಿ 35 ವರ್ಷಗಳ ಸುದೀರ್ಘ ಸಂಘರ್ಷವನ್ನು ಅಂತ್ಯಗೊಳಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ಸಂಘಟನೆಗಳು ಒಪ್ಪಿಕೊಂಡವು’ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗೃಹ ಸಚಿವ ಅಮಿತ್‌ ಶಾ ಅಭಿಪ್ರಾಯಪಟ್ಟರು.

‘328 ಬಂಡುಕೋರರು ಸಮಾಜದ ಮುಖ್ಯ ವಾಹಿನಿಗೆ ಬರಲು ಮುಂದಾಗಿದ್ದಾರೆ. ಬಂಡುಕೋರ ಗುಂಪುಗಳು ತಮ್ಮ ಕಾರ್ಯಸ್ಥಾನವನ್ನಾಗಿಸಿಕೊಂಡಿದ್ದ ಪ್ರದೇಶಗಳ ಅಭಿವೃದ್ಧಿಗೆ ₹250 ಕೋಟಿ ಅನುದಾನಕ್ಕೆ ಸಮ್ಮತಿ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಈಶಾನ್ಯಾ ರಾಜ್ಯಗಳ ಅಭಿವೃದ್ಧಿ ಸಾಕಾರಕ್ಕೆ ಪ್ರಧಾನಿ ಮೋದಿ ಅವರ ‘ಅಷ್ಟಲಕ್ಷ್ಮಿ’ ಹಾಗೂ ‘ಪೂರ್ವೋದಯ’ ಪರಿಕಲ್ಪನೆಯನ್ನು ಪರಿ‌ಚಯಿಸಿದ್ದಾರೆ. ಈ ಪರಿಕಲ್ಪನೆಯ ಯಶಸ್ಸಿಗೆ ಈ ಶಾಂತಿ ಒಪ್ಪಂದವು ಪ್ರಮುಖ ಹೆಜ್ಜೆಯಾಗಿದೆ’ ಎಂದು ಅವರು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.