ನವದೆಹಲಿ : ಭಾರತದಲ್ಲಿ ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಕಾರ್ಯಕಾರಿ ಮಂಡಳಿ ಮುಖ್ಯಸ್ಥರಾಗಿ ಮೇ 22ರಂದು ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
24 ಸದಸ್ಯರಿರುವ ಡಬ್ಲ್ಯುಎಚ್‌ಒ ಕಾರ್ಯಕಾರಿ ಮಂಡಳಿಗೆ ಪ್ರಸ್ತುತ ಜಪಾನ್‌ನ ಡಾ.ಹಿರೊಕಿ ನಾಕಟನಿ ಅಧ್ಯಕ್ಷರಾಗಿದ್ದಾರೆ.ಭಾರತದಿಂದ ನಾಮನಿರ್ದೇಶಿತರಾದ ಹರ್ಷವರ್ಧನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಸ್ತಾವನೆಗೆ 194 ರಾಷ್ಟ್ರಗಳು ಇರುವ ವಿಶ್ವ ಆರೋಗ್ಯ ಸಭೆ ಸಹಿ ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.