ADVERTISEMENT

ಘಟಿಕೋತ್ಸವಗಳಿಗೆ ಭಾರತೀಯ ವಸ್ತ್ರ ಸಂಹಿತೆ ರೂಪಿಸಿ: ಕೇಂದ್ರ ಆರೋಗ್ಯ ಸಚಿವಾಲಯ

ಪಿಟಿಐ
Published 23 ಆಗಸ್ಟ್ 2024, 10:57 IST
Last Updated 23 ಆಗಸ್ಟ್ 2024, 10:57 IST
   

ನವದೆಹಲಿ: ಆಯಾ ರಾಜ್ಯಗಳ ಸಂಪ್ರದಾಯಗಳಿಗೆ ತಕ್ಕಂತೆ ಘಟಿಕೋತ್ಸವಗಳಿಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ವಸ್ತ್ರ ಸಂಹಿತೆ ರೂಪಿಸುವಂತೆ ಅಧೀನ ಸಂಸ್ಥೆಗಳಿಗೆ ಕೇಂದ್ರದ ಆರೋಗ್ಯ ಸಚಿವಾಲಯ ಸೂಚಿಸಿದೆ.

ಸದ್ಯ, ಘಟಿಕೋತ್ಸವಗಳಲ್ಲಿ ಬಳಸುತ್ತಿರುವ ಕಪ್ಪು ನಿಲುವಂಗಿ ಮತ್ತು ಟೋಪಿಯು ವಸಾಹತುಶಾಹಿ ಪರಂಪರೆಯಾಗಿದ್ದು, ಅದನ್ನು ಬದಲಿಸಬೇಕು ಎಂದು ಹೇಳಿದೆ.

ಈ ಉಡುಪು ಯುರೋಪ್‌ನಲ್ಲಿ ಮಧ್ಯಯುಗದಲ್ಲಿ ಹುಟ್ಟಿಕೊಂಡಿತು. ಬ್ರಿಟಿಷರು ತಮ್ಮ ಎಲ್ಲಾ ವಸಾಹತುಗಳಲ್ಲಿ ಅದನ್ನು ಪರಿಚಯಿಸಿದರು ಎಂದು ಅದು ಹೇಳಿದೆ.

ADVERTISEMENT

‘ಸರ್ಕಾರ ಕೈಗೊಂಡಿರುವ ನಿರ್ಧಾರದಂತೆ ಸಚಿವಾಲಯದ ಅಡಿಯಲ್ಲಿ ಬರುವ ಎಐಐಎಂಎಸ್/ಐಎನ್‌ಐಗಳು ಸೇರಿದಂತೆ ವೈದ್ಯಕೀಯ ಶಿಕ್ಷಣ ನೀಡುವ ಎಲ್ಲ ಸಂಸ್ಥೆಗಳು ಇರುವ ರಾಜ್ಯಗಳ ಸಂಪ್ರದಾಯಗಳ ಆಧಾರದ ಮೇಲೆ ಘಟಿಕೋತ್ಸವಗಳಿಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ಸೂಕ್ತ ವಸ್ತ್ರ ಸಂಹಿತೆ ರೂಪಿಸಬೇಕು’ಎಂದು ಪ್ರಕಟಣೆ ತಿಳಿಸಿದೆ.

ಈ ಸಂಬಂಧ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.