ಅಹಮದಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಬೊತದ್ ಜಿಲ್ಲೆಯ ಸಲನ್‌ಪುರದಲ್ಲಿರುವ ಹನುಮ ದೇವಾಲಯದ ಆವರಣದಲ್ಲಿ 'ಯಾತ್ರಿಕ ಭವನ'ವನ್ನು ಗುರುವಾರ ಉದ್ಘಾಟಿಸಿದ್ದಾರೆ.
ಶ್ರೀ ಕಷ್ತಭಂಜನ್ ದೇವ್ ಹನುಮ ದೇವಾಲಯಕ್ಕೆ ಲಕ್ಷಾಂತರ ಭಕ್ತರು ವರ್ಷವಿಡೀ ಭೇಟಿ ನೀಡುತ್ತಾರೆ.
'ಗೋಪಾಲನಂದ ಸ್ವಾಮಿ ಯಾತ್ರಿಕ ಭವನ'ವು 1,100 ವಿಶ್ರಾಂತಿ ಕೊಠಡಿಗಳನ್ನು ಹೊಂದಿದ್ದು, ಇದನ್ನು ₹ 200 ಕೋಟಿ ವೆಚ್ಚದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದೆ.
ಭವನದ ಉದ್ಘಾಟನೆ ಬಳಿಕ ಮಾತನಾಡಿರುವ ಅಮಿತ್ ಶಾ, 'ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಇಲ್ಲಿಯೇ ಉಳಿಯ ಬಯಸುವ ಭಕ್ತರಿಗಾಗಿ ಯಾತ್ರಿಕ ಭವನವನ್ನು ನಿರ್ಮಿಸಲು ನೆರವಾದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗಲೆಲ್ಲ, ಭಗವಂತ ಹನುಮಂತನನ್ನು ಪ್ರಾರ್ಥಿಸಲು ಇಲ್ಲಿಗೆ ಭೇಟಿ ನೀಡುತ್ತೇನೆ' ಎಂದಿದ್ದಾರೆ.
ಬಳಿಕ ಅವರು, ಇದೇ ಗ್ರಾಮದಲ್ಲಿರುವ ಸ್ವಾಮಿ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.