ನವದೆಹಲಿ: ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೈಗೊಂಡಿರುವ ಈಶಾನ್ಯ ರಾಜ್ಯಗಳ ಪ್ರವಾಸದ ಭಾಗವಾಗಿ ಶನಿವಾರದಂದು ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರದ ಸಚಿವರು ನಾಗಾಲ್ಯಾಂಡ್ ರಾಜ್ಯದಲ್ಲಿರುವ ಧೀಮಾಪುರದ ಕೇಂದ್ರದ ಭಾರೀ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸಿಮೆಂಟ್ ಕಾರ್ಪೊರೇಷನ್ ಆಡಳಿತದ 'ಬೋಕಾಜನ್' ಸಿಮೆಂಟ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿರವರು ಉತ್ತರ-ಪೂರ್ವ ವೀಕ್ಷಣೆಗಾಗಿ ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದರು.
ಕೇಂದ್ರ ಸಚಿವ ಎಚ್ .ಡಿ. ಕುಮಾರಸ್ವಾಮಿ ರವರು ನಾಗಾಲ್ಯಾಂಡ್‌ನ ಬೋಕಾಜಾನ್ ಸಿಮೆಂಟ್ ಕಾರ್ಖಾನೆಯನ್ನು ಭೇಟಿಯಾಗಿದ್ದಾರೆ.
ಕೇಂದ್ರ ಸಚಿವ ಅರುಣಾಚಲ ಪ್ರದೇಶದ ಕ್ಯಾಬಿನೆಟ್ ಸಮಿತಿ (CCI) ಗೆ ಸಕಾರಾತ್ಮಕ ಫಲಿತಾಂಶವನ್ನು ಭರವಸೆ ನೀಡಿದರು.
ಹೆಚ್.ಡಿ. ಕುಮಾರಸ್ವಾಮಿ ಉತ್ತರ-ಪೂರ್ವದ ಜನರಿಗಾಗಿ ಪರಿಹಾರಗಳನ್ನು ಭರವಸೆ ನೀಡಿದರು
ಬೋಕಾಜಾನ್ ಸಿಮೆಂಟ್ ಕಾರ್ಖಾನೆಯ ಭೇಟಿ ಕೊಟ್ಟ ಸಮಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಿಷ್ಟು; "ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಗಳ ಅನುಕೂಲಕ್ಕಾಗಿ ಮಾಜಿ ಪ್ರಧಾನಿಗಳಾದ ದೇವೇಗೌಡರು ಮತ್ತು ವಾಜಪೇಯಿ ಅವರು ಕೈಗೊಂಡ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದ್ದು, ಅದರಂತೆಯೇ ಈ ಭಾಗದ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.
ಅಲ್ಲದೆ, ದೇವೇಗೌಡರು ಪ್ರಧಾನಿಗಳಾಗಿದ್ದಾಗ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ ಇಲ್ಲಿಯೆ ಸುದೀರ್ಘ ಪ್ರವಾಸ ಕೈಗೊಂಡು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಅದರ ಪರಿಣಾಮವೇ ಬ್ರಹ್ಮಪುತ್ರ ನದಿಗೆ ಬೋಗಿವೆಲ್ ಸೇತುವೆ ಸೇರಿ ಅನೇಕ ಯೋಜನೆಗಳು ಕಾರ್ಯಗತ ಆಗಿವೆ ಎಂದು ಕೇಂದ್ರ ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ದೊಡ್ಡ ಪ್ರಮಾಣದಲ್ಲಿ ಈಶಾನ್ಯ ಭಾರತದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಅದರ ಭಾಗವಾಗಿ ನಾನು ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡಿದ್ದೇನೆ ಎಂದು ಅವರು ಹೇಳಿದರು.
"ನರೇಂದ್ರ ಮೋದಿ ಅವರು ನಾಗರೀಕರೊಂದಿಗೆ ನೇರ ಸಂವಾದ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಕೇಂದ್ರ ಸಚಿವರನ್ನು ನೇಮಿಸಿದ್ದಾರೆ. ಅಲ್ಲದೆ; ಪ್ರಧಾನಿಗಳು ಕೂಡ ಅವಿರತವಾಗಿ ದೇಶಾದ್ಯಂತ ಪ್ರವಾಸ ಮಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರ ಮಾರ್ಗದಲ್ಲಿಯೇ ನಾವು ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.
ನಾನು ಈಶಾನ್ಯ ರಾಜ್ಯಗಳ ಭೇಟಿಗೆ ಬಹಳಷ್ಟು ಮಹತ್ವ ನೀಡಿದ್ದೇನೆ. ಇದರ ಭಾಗವಾಗಿ ಶುಕ್ರವಾರ ನಾಗಾಲ್ಯಾಂಡ್ ಧೀಮಾಪುರದಲ್ಲಿ ಆ ರಾಜ್ಯದ ಮುಖ್ಯಮಂತ್ರಿ ನೀಪ್ಯೂ ರಿಯೂ ಅವರನ್ನು ಭೇಟಿಯಾದೆ. ಅವರು ನನಗೆ ಕೆಲವು ನಿರ್ಧಿಷ್ಟ ವಲಯಗಳ ಕಡೆ ಗಮನ ಹರಿಸಲು ಸಲಹೆ ನೀಡಿದ್ದಾರೆ. ಅವರ ಸಲಹೆಗಳನ್ನು ನಾವು ಮಹತ್ವಪೂರ್ಣವಾಗಿ ಪರಿಗಣಿಸುತ್ತೇವೆ ಎಂದು ಸಚಿವರು ಹೇಳಿದರು.
ದೀಮಾಪುರ ಬೋಕಾಜನ್ ಸಿಮೆಂಟ್ ಕಾರ್ಖಾನೆ ಬಗ್ಗೆ ನಾವು ಬದ್ಧತೆಯಿಂದ ಕೆಲಸ ಮಾಡುತ್ತೇವೆ. ಅದರಂತೆಯೇ ಕಾರ್ಖಾನೆಗೆ ಭೇಟಿ ನೀಡಿದ್ದೇನೆ. ಕಾರ್ಖಾನೆಯ ಕ್ಷಮತೆ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ನಾವು ನಿರ್ದಿಷ್ಟ ಕಾರ್ಯಸೂಚಿ ಪ್ರಕಾರ ಕೆಲಸ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಈಶಾನ್ಯ ರಾಜ್ಯಗಳಲ್ಲಿ ಹೂಡಿಕೆಗೆ ಉತ್ತೇಜನ ಕೊಡುವುದು, ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡುವುದು ಹಾಗೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡಿ ವಲಸೆ ತಪ್ಪಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಾಗಾಲ್ಯಾಂಡ್ ಸಿಎಂ ಜತೆ ಮಾತುಕತೆ:
ಕೇಂದ್ರ ಸಚಿವರು ಗುರುವಾರ ಸಂಜೆ ನಾಗಾಲ್ಯಾಂಡ್ ನ ಧೀಮಾಪುರ ತಲುಪಿದರು. ರಾಜ್ಯದ ಮುಖ್ಯಮಂತ್ರಿ ನೀಪ್ಯೂ ರಿಯೂ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕೈಗಾರಿಕೆ ಸ್ಥಾಪನೆ, ಉದ್ಯೋಗ ಸೃಷ್ಟಿಗೆ ಹೆಚ್ಚು ಆದ್ಯತೆ ಕೊಡಬೇಕು. ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಿಎಂ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ಬೋಕಾಜನ್ ಸಿಮೆಂಟ್ ಕಾರ್ಖಾನೆ ಸ್ಥಿತಿ ಒಳ್ಳೆಯದಿಲ್ಲ. ಆದರೆ, 1971ರಲ್ಲಿ ಮಾಜಿ ರಾಷ್ಟ್ರಪತಿ ಫಖ್ರುದ್ದೀನ್ ಅಲಿ ಅಹಮದ್ ಅವರು ಉದ್ಘಾಟನೆ ಮಾಡಿದ್ದರು. 1974ರಿಂದ ಈ ಕಾರ್ಖಾನೆ ಉತ್ತಮವಾಗಿ ಕಾರ್ಯಾಚರಣೆ ಮಾಡುತ್ತಾ ಬಂದಿದೆ. ಆದರೆ, ಕಾರ್ಖಾನೆಯ ಮೂಲಸೌಕರ್ಯಗಳು ಅಭಿವೃದ್ಧಿ ಆಗಿಲ್ಲ ಎಂದು ಅವರು ಹೇಳಿದರು.
ನಾನು ಭಾರೀ ಕೈಗಾರಿಕಾ ಇಲಾಖೆಯನ್ನು ವಹಿಸಿಕೊಂಡ ಮೇಲೆ ಭಾರತೀಯ ಸೀಮೆಟ್ ಕಾರ್ಖಾನೆಯ ಅಭಿವೃದ್ಧಿ ಬಗ್ಗೆ, ಕ್ಷಮತೆ ಉತ್ಪಾದನೆ ಹೆಚ್ಚಿಸುವ ಬಗ್ಗೆ ದೆಹಲಿಯಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದೇವೆ ಎಂದ ಸಚಿವರು; ಅದಕ್ಕೆ ಅಗತ್ಯವಾದ ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಒದಲಾಗಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಇದೇ ವೇಳೆ ಸಚಿವರು ಅರುಣಾಚಲ ಪ್ರದೇಶದ ಉಪ ಸಭಾಪತಿ ಕಾರ್ಡೋ ನಿಗ್ಯೊರ್ ಅವರನ್ನು ಕೂಡ ಭೇಟಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.