ನವದೆಹಲಿ: ಕೇಂದ್ರ ಸಚಿವ ಕಿರಣ್ ರಿಜಿಜು ಅರುಣಾಚಲ ಪ್ರದೇಶದ ಬುಮ್ಲಾ ವಾಸ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಇಂದು (ಶುಕ್ರವಾರ) ಆಚರಿಸಿದ್ದಾರೆ.
ಇದೇ ವೇಳೆ ಚೀನಾದ ಪಿಎಲ್‌ಎ ಸೈನಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಕಿರಣ್ ರಿಜಿಜು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಾಗೂ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಬ್ಬರೂ ಈಗ ಭಾರತದ ಗಡಿ ಅಭಿವೃದ್ಧಿ ಬಗ್ಗೆ ಹೆಮ್ಮೆಪಡುತ್ತಾರೆ. ಅರುಣಾಚಲ ಪ್ರದೇಶದ ಬುಮ್ಲಾ ಪಾಸ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿರುವುದಾಗಿ ತಿಳಿಸಿದ್ದಾರೆ.
'ಅತ್ಯಂತ ಕಠಿಣ ಗಡಿ ಪ್ರದೇಶಗಳಲ್ಲಿ ಯೋಧರೊಂದಿಗೆ ದೀಪಾವಳಿ ಹಬ್ಬದ ಆಚರಣೆಯು ವಿಶಿಷ್ಟ ಭಾವನೆಯನ್ನು ನೀಡುತ್ತದೆ. ಗಡಿ ಭದ್ರವಾಗಿರುವಷ್ಟು ರಾಷ್ಟ್ರವೂ ಸುರಕ್ಷಿತವಾಗಿರುತ್ತದೆ' ಎಂದು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.