ಕೋಲ್ಕತ್ತ: ಕೇಂದ್ರ ಸಚಿವ ಮತ್ತು ಕೋಲ್ಕತ್ತದ ಟಾಲಿಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೊ ಅವರಿಗೆ ಕೋವಿಡ್–19 ದೃಢಪಟ್ಟಿದೆ.
ಬಾಬುಲ್ ಅವರ ಪತ್ನಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ.
'ನನಗೆ ಎರಡನೇ ಬಾರಿ ಕೋವಿಡ್ ದೃಢಪಟ್ಟಿದೆ. ಆಸನ್‌ಸೋಲ್‌ನಲ್ಲಿ ಮತದಾನ ಮಾಡುವುದು ಸಾಧ್ಯವಾಗುತ್ತಿಲ್ಲ ಎಂದು ಬೇಸರವಾಗಿದೆ. 26ರಂದು ಮತದಾನದ ದಿನ ನಾನು ಅಲ್ಲಿರಬೇಕಿತ್ತು...' ಎಂದು ಬಾಬುಲ್ ಸುಪ್ರಿಯೊ ಟ್ವೀಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.