ಲೆಹ್/ಜಮ್ಮು: ಲಡಾಖ್‌ನಲ್ಲಿ ಇಂಧನ ಮತ್ತು ಗೃಹ ಇಲಾಖೆಗಳ ಪ್ರಗತಿಯನ್ನು ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್ ಗುರುವಾರ ಪರಿಶೀಲಿಸಿದರು.
ಲಡಾಖ್‌ನಲ್ಲಿ ಸೋಲಾರ್ ವಿದ್ಯುತ್ ಅಭಿವೃದ್ಧಿಗೆ ವಿಪುಲ ಅವಕಾಶಗಳ ಸದ್ಬಳಕೆ ಆಗಬೇಕು. ಲಡಾಖ್‌ನಲ್ಲಿರುವ ವಸತಿರಹಿತರ ಸಮೀಕ್ಷೆ ನಡೆಸಬೇಕು ಎಂದೂ ಸೂಚಿಸಿದರು.
ಲಡಾಖ್‌ನಲ್ಲಿ 13 ಜಿಡಬ್ಲ್ಯೂ ಸಾಮರ್ಥ್ಯದ ಸೋಲಾರ್ ಸ್ಥಾವರ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದು, ಸ್ಥಳೀಯರ ಜೊತೆಗೆ ದೇಶದ ಇತರೆ ಭಾಗದ ಬೇಡಿಕೆಯನ್ನು ಈಡೇರಿಸಲಿದೆ ಎಂದು ಇದೇ ವೇಳೆ ಹೇಳಿದರು.
ಮೂರು ದಿನದ ಪ್ರವಾಸಕ್ಕಾಗಿ ಖಟ್ಟರ್ ಅವರು ಗುರುವಾರ ಇಲ್ಲಿಗೆ ಆಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.