ನವದೆಹಲಿ: ಡೆಲಿವರಿ ಬಾಯ್ ಹಿಂದೂ ಅಲ್ಲದ ಕಾರಣ ಗ್ರಾಹಕರೊಬ್ಬರು ಜೊಮ್ಯಾಟೊ ಆರ್ಡರ್ ರದ್ದು ಮಾಡಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಮದಾಸ್ ಅಠವಳೆ, ಇದು ದೇಶದ ಒಗ್ಗಟ್ಟಿಗೆ ಭೀತಿ ಹುಟ್ಟಿಸುತ್ತದೆ.ಈ ರೀತಿಯ ಘಟನೆ ಸಮಾಜದಲ್ಲಿ ಒಡಕು ಸೃಷ್ಟಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಅದೇ ವೇಳೆ ಪ್ರಕರಣ ಬಗ್ಗೆ ತನಿಖೆ ನಡೆಸಬೇಕೆಂದು ಸಚಿವರು ಒತ್ತಾಯಿಸಿದ್ದಾರೆ.
ಈ ನಡುವೆ ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ಟ್ವೀಟ್‌ನ್ನು ರಿಟ್ವೀಟ್ ಮಾಡಿದ ಒಮರ್ ಅಬ್ದುಲ್ಲಾ, ಗೌರವಗಳು..ನಿಮ್ಮ ಆ್ಯಪ್ ನಾನು ಇಷ್ಟಪಡುತ್ತೇನೆ. ನಿಮ್ಮ ಕಂಪನಿಯನ್ನು ಇಷ್ಟ ಪಡುವುದಕ್ಕೆ ಕಾರಣ ನೀಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ಏನಿದು ಪ್ರಕರಣ?
ಜೊಮ್ಯಾಟೊ ಫುಡ್ ಡೆಲಿವರಿ ಆ್ಯಪ್ ಮೂಲಕ ಆಹಾರ ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರು ಡೆಲಿವರಿ ಬಾಯ್ ಹಿಂದೂ ಅಲ್ಲದ ಕಾರಣ ಫುಡ್ ಆರ್ಡರ್ ರದ್ದು ಮಾಡಿರುವ ವಿಷಯವನ್ನು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಜೊಮ್ಯಾಟೊಆಹಾರಕ್ಕೆ ಧರ್ಮವಿಲ್ಲ, ಅದೇಧರ್ಮಎಂದು ಉತ್ತರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.