ADVERTISEMENT

ಬಿಹಾರ: ಕೇಂದ್ರ ಸಚಿವ ಪಶುಪತಿ ಪರಾಸ್ ರಾಜೀನಾಮೆ; ಎನ್‌ಡಿಎಯಿಂದ ಹೊರ ಬಂದ ಎಲ್‌ಜೆಪಿ

ಏಜೆನ್ಸೀಸ್
Published 19 ಮಾರ್ಚ್ 2024, 7:41 IST
Last Updated 19 ಮಾರ್ಚ್ 2024, 7:41 IST
<div class="paragraphs"><p>ಪಶುಪತಿ ಪರಾಸ್</p></div>

ಪಶುಪತಿ ಪರಾಸ್

   

ನವದೆಹಲಿ: ಎಲ್‌ಜೆಪಿ (ಪಶುಪತಿ) ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಪಶುಪತಿ ಪರಾಸ್ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದು ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಅಸಮಾಧಾನಗೊಂಡಿರುವ ಪಶುಪತಿ ಪರಾಸ್ ಈ ಘೋಷಣೆ ಮಾಡಿದ್ದಾರೆ. 

ADVERTISEMENT

ಚಿರಾಗ್ ಪಾಸ್ವಾನ್ ಅವರು ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ರಾಜು ತಿವಾರಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದೆ. ಬಿಜೆಪಿ 17, ಜೆಡಿಯು 16 ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ರಾಮ್ ವಿಲಾಸ್) ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.

ಎನ್‌ಡಿಎ ಭಾಗವಾಗಿರುವ ಮತ್ತೆರಡು ಮಿತ್ರಪಕ್ಷಗಳಾದ ಹಿಂದೂ ಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಮತ್ತು ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಮೋರ್ಹಾ ತಲಾ ಒಂದು ಸ್ಥಾನಕ್ಕೆ ಸ್ಪರ್ಧಿಸಲಿವೆ ಎಂದು ಬಿಹಾರದ ಬಿಜೆಪಿ ಚುನಾವಣಾ ಉಸ್ತುವಾರಿ ವಿನೋದ್ ತಾವ್ಡೆ ಹೇಳಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ರಾಜ್ಯದ ಒಟ್ಟು 40 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ 39 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಬಿಹಾರದಲ್ಲಿ ಎಲ್‌ಜಿಪಿ ಎರಡು ಬಣಗಳಾಗಿದೆ. ದಿ. ರಾಮ್‌ ವಿಲಾಸ್ ಪುತ್ರ ಚಿರಾಗ್ ಪಾಸ್ವಾನ್ ನೇತೃತ್ವದ ಒಂದು ಬಣ ಹಾಗೂ ದಿ.ರಾಮ್‌ ವಿಲಾಸ್ ಸಹೋದರ ಪಶುಪತಿ ಪರಾಸ್ ನೇತೃತ್ವದ ಮತ್ತೊಂದು ಬಣ. 

ಪಶುಪತಿ ಪರಾಸ್ ನೇತೃತ್ವದ ಎಲ್‌ಜಿಪಿ ಈ ಹಿಂದೆ ಎನ್‌ಡಿಎ ಭಾಗವಾಗಿತ್ತು. ಆದ್ದರಿಂದ ಪಶುಪತಿ ಪರಾಸ್ ಕೇಂದ್ರ ಸಚಿವರಾಗಿದ್ದರು. ಇತ್ತೀಚೆಗೆ ಚಿರಾಗ್ ಪಾಸ್ವಾನ್ ಎನ್‌ಡಿಎ ಮೈತ್ರಿ ಕೂಟ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಚಿರಾಗ್‌ ಚಿಕ್ಕಪ್ಪ ಪಶುಪತಿ ಪರಾಸ್ ಕೋಪಗೊಂಡು ಎನ್‌ಡಿಎ ಮೈತ್ರಿಕೂಟ ತೊರೆದಿದ್ದಾರೆ. 

ಈ ಸಲದ ಸೀಟು ಹಂಚಿಕೆಯಲ್ಲಿ ಬಿಜೆಪಿಯು ಪಶುಪತಿ ಪರಾಸ್ ಬಣಕ್ಕೆ ಯಾವುದೇ ಸ್ಥಾನ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.