ಪಣಜಿ: ಕೇಂದ್ರ ಸಚಿವ ಶ್ರೀಪದ್ ನಾಯ‌್ಕ್ ಅವರು ಕೋವಿಡ್–19 ನಿಂದ ಗುಣಮುಖರಾಗಿ ಶನಿವಾರ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆಯುಷ್ ಸಚಿವಾಲಯದ ರಾಜ್ಯ ಖಾತೆ ಸಚಿವರಾದ ಅವರು ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ದೇವರ ದಯೆಯಿಂದ, ನನ್ನ ಕೋವಿಡ್–19 ವರದಿಯು ನೆಗೆಟಿವ್ ಬಂದಿದೆ ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ಇಂತಹ ಸಂಕಷ್ಟದ ಸಮಯದಲ್ಲಿ ಕಾಳಜಿ ಮತ್ತು ಬೆಂಬಲ ನೀಡಿದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಮಾಣಿಕವಾಗಿ ಧನ್ಯವಾದ ಅರ್ಪಿಸಲು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ತಾವು ಅತ್ಯಂತ ಸಕಾರಾತ್ಮಕ ವ್ಯಕ್ತಿಯಾಗಿ ಮತ್ತು ಪುನರ್ಯೌವನದ ವ್ಯಕ್ತಿಯಾಗಿ ಹೊರಹೊಮ್ಮಿರುವುದಾಗಿ ಹೇಳಿಕೆಯನ್ನೂ ನೀಡಿದ್ದಾರೆ.
‘ನಾನು ಈ ದಿನ ಇನ್ನೊಬ್ಬ ಗುಣಮುಖ ವ್ಯಕ್ತಿಯಾಗಿ ಮತ್ತು ಕೋವಿಡ್–19 ಸಾಂಕ್ರಾಮಿಕದ ಅಂಕಿ–ಅಂಶವಾಗಿಯೂ ಮರಳಿದ್ದೇನೆ. ಜೊತೆಗೆತುಂಬಾ ಸಕಾರಾತ್ಮಕ ಮನೋಭಾವ ತುಂಬಿದ ಹಾಗೂ ಮರುಯೌವ್ವನಗೊಳಿಸಿದ ವ್ಯಕ್ತಿಯಾಗಿಯೂ ಹೊರಹೊಮ್ಮಿದ್ದೇನೆ’ ಎಂದಿದ್ದಾರೆ.
ಶ್ರೀಪದ್ ಅವರು ಗೋವಾ ಮುನಿಸಿಪಲ್ ಆಸ್ಪತ್ರೆಗೆ ಆಗಸ್ಟ್ 14ರಂದು ದಾಖಲಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.