ADVERTISEMENT

ತ್ರಿಶೂರ್ ಪೂರಂ ವಿವಾದ: ಸಿಬಿಐ ತನಿಖೆ ನಡೆಸಲು ಧೈರ್ಯವಿದೆಯೇ?: ಸುರೇಶ್ ಗೋಪಿ

ಪಿಟಿಐ
Published 31 ಅಕ್ಟೋಬರ್ 2024, 9:37 IST
Last Updated 31 ಅಕ್ಟೋಬರ್ 2024, 9:37 IST
<div class="paragraphs"><p>ಸುರೇಶ್ ಗೋಪಿ</p></div>

ಸುರೇಶ್ ಗೋಪಿ

   

(ಪಿಟಿಐ ಚಿತ್ರ)

ತ್ರಿಶೂರ್: ಪ್ರಸಕ್ತ ಸಾಲಿನ ಏಪ್ರಿಲ್‌ನಲ್ಲಿ ನಡೆದ ತ್ರಿಶೂರ್ ಪೂರಂ ಉತ್ಸವ ಪ್ರದೇಶಕ್ಕೆ ತಲುಪಲು ಆಂಬುಲೆನ್ಸ್ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸುರೇಶ್ ಗೋಪಿ, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ADVERTISEMENT

ಸುರೇಶ್ ಗೋಪಿ ಆಂಬುಲೆನ್ಸ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಕೇರಳ ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ಆದರೆ ತಮ್ಮ ಮೇಲಿನ ಆರೋಪವನ್ನು ಸುರೇಶ್ ಗೋಪಿ ತಳ್ಳಿ ಹಾಕಿದ್ದಾರೆ. 'ಉತ್ಸವ ನಡೆಯುವ ಮೈದಾನದವರೆಗೆ ತಮ್ಮ ಕಾರಿನಲ್ಲೇ ಬಂದಿದ್ದೆ. ಈ ವೇಳೆ ಗೂಂಡಾಗಳು ತಮ್ಮ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಯುವಕರು ತಮ್ಮನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ದರು' ಎಂದು ಹೇಳಿದ್ದಾರೆ.

'ಘಟನೆ ಬಗ್ಗೆ ನಾನು ವಿವರಿಸುವ ಅಗತ್ಯವಿಲ್ಲ. ಸಿಬಿಐ ತನಿಖೆ ನಡೆಯಲಿ. ತನಿಖೆ ಸಿಬಿಐಗೆ ವಹಿಸಲು ಕೇರಳ ಸರ್ಕಾರಕ್ಕೆ ಧೈರ್ಯವಿದೆಯೇ? ಸತ್ಯ ಹೊರಬರಬೇಕಾದರೆ ಸಿಬಿಐ ತನಿಖೆ ನಡೆಯಬೇಕಿದೆ' ಎಂದು ಹೇಳಿದರು.

'ಕರುವನ್ನೂರು ಸಹಕಾರಿ ಬ್ಯಾಂಕ್ ಹಗರಣದಂತಹ ಹಣಕಾಸಿನ ವಂಚನೆಗಳನ್ನು ಮರೆಮಾಚಲು ಈ ಎಲ್ಲ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ' ಎಂದು ಅವರು ಆರೋಪಿಸಿದರು.

ಈ ಮೊದಲು ತ್ರಿಶೂರ್ ಪೂರಂ ಆಚರಣೆಗಳಿಗೆ ಅಡ್ಡಿಯಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದರು.

ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಹಿಂದೂ ಭಾವನೆಗಳನ್ನು ಕೆರಳಿಸಿ ಬಿಜೆಪಿ ಗೆಲ್ಲುವಂತೆ ಮಾಡಲು ಪೂರಂ ಅನ್ನು ಅಡ್ಡಿಪಡಿಸಲಾಗಿದೆ ಎಂದು ಕಾಂಗ್ರೆಸ್ ಮತ್ತು ಎಡ ಮಿತ್ರಪಕ್ಷ ಸಿಪಿಐ ಆರೋಪಿಸಿತ್ತು.

ಪೂರಂ ಅಡ್ಡಿಪಡ್ಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ತನಿಖೆಗೆ ಆದೇಶಿಸಿದೆ. ತ್ರಿಶೂರ್ ಪೂರಂ ಇತಿಹಾಸದಲ್ಲೇ ಮೊದಲ ಬಾರಿ ನಸುಕಿನ ವೇಳೆ ನಿಗದಿಯಾಗಿದ್ದ ಸಿಡಿಮದ್ದು ಪ್ರದರ್ಶನ ಮರುದಿನ ಹಗಲು ಹೊತ್ತಿನಲ್ಲಿ ಆಯೋಜನೆಯಾಗಿರುವುದು ಪ್ರೇಕ್ಷಕರಲ್ಲಿ ನಿರಾಸೆಗೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.