ADVERTISEMENT

ಅಮೆರಿಕ ಮೂಲದ ಸಂಘಟನೆಯಿಂದ ಒಡಿಶಾ ಸಿ.ಎಂ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆ

ಪಿಟಿಐ
Published 2 ಜೂನ್ 2021, 5:55 IST
Last Updated 2 ಜೂನ್ 2021, 5:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭುವನೇಶ್ವರ: ಒಡಿಶಾದ ಮಹಿಳೆಯೊಬ್ಬರು ಸ್ಥಾಪಿಸಿರುವ ಅಮೆರಿಕ ಮೂಲದ ಸಂಸ್ಥೆಯೊಂದು ಕೋವಿಡ್‌ ಪಿಡುಗಿನ ವಿರುದ್ಧ ಹೋರಾಟಕ್ಕಾಗಿ ಒಡಿಶಾದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು ₹50 ಲಕ್ಷವನ್ನು ದೇಣಿಗೆ ನೀಡಿದೆ.

ಜಯಶ್ರೀ ಮೊಹಂತಿ ಅವರು ನಿರ್ವಹಿಸುತ್ತಿರುವ ‘ಅವರ್‌ ಬಿಸ್ವಾಸ್‌’ (ನಮ್ಮ ವಿಶ್ವಾಸ) ಸಂಸ್ಥೆಯು ಒಡಿಶಾದ ವಿವಿಧ ಭಾಗಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ 2008ರಿಂದ ಕೆಲಸ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

‘ಸಮಯೋಚಿತ ನಿರ್ಧಾರಗಳು ಮತ್ತು ಸೂಕ್ತ ಕ್ರಮದಿಂದಾಗಿ, ಒಡಿಶಾದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎಲ್ಲರ ಸಹಕಾರದೊಂದಿಗೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ರಾಜ್ಯವು ವಿಜಯಶಾಲಿಯಾಗುತ್ತದೆ’ ಎಂದು ಮೊಹಂತಿ ಭರವಸೆ ವ್ಯಕ್ತಪಡಿಸಿದ್ದಾರೆ.

ADVERTISEMENT

ವಿಶ್ವದಾದ್ಯಂತ ತೀವ್ರ ಬಡತನದಲ್ಲಿರುವ ಮಹಿಳೆಯರು ಮತ್ತು ಬಾಲಕಿಯರ ಪ್ರಗತಿಗೆ ಸಂಸ್ಥೆ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಸಂಸ್ಥೆ ಹೇಳಿದೆ.

ಸಂಸ್ಥೆಯು ₹49.89 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜೀವ್‌ ಚೋಪ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.