ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬಿಜೆಪಿ ಉಚ್ಛಾಟಿತ ನಾಯಕ ಕುಲ್‌ದೀಪ್ ಸಿಂಗ್ ಸೆಂಗರ್ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನು ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಮಾರ್ಪಡಿಸಿದೆ.
ಈ ಮುನ್ನ, ಕುಲ್‌ದೀಪ್ ಅವರಿಗೆ ಅವರ ಮಗಳ ಮದುವೆಯ ಕಾರಣಕ್ಕಾಗಿ ಎರಡು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು.
ಸದ್ಯ ಈ ಆದೇಶವನ್ನು ಮಾರ್ಪಡಿಸಿರುವ ದೆಹಲಿ ಹೈಕೋರ್ಟ್, ತಮ್ಮ ಮಗಳ ತಿಲಕ್ ಸಮಾರಂಭದ ಬಳಿಕ ಜೈಲಿಗೆ ಮರಳುವಂತೆ ಕುಲದೀಪ್ ಅವರಿಗೆ ಸೂಚಿಸಿದ್ದು, ಮದುವೆ ಸಂದರ್ಭದಲ್ಲಿ ಮತ್ತೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಶುಕ್ರವಾರ ಬೆಳಿಗ್ಗೆ ತಿಹಾರ್ ಜೈಲಿನಿಂದ ಸೆಂಗಾರ್ ಬಿಡುಗಡೆಯಾಗಿದ್ದಾರೆ.
‘ತನಗೆ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಇರುವುದರಿಂದ ಕುಲ್‌ದೀಪ್ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನು ಆದೇಶವನ್ನು ಹಿಂಪಡೆಯಬೇಕು’ ಎಂದು ಕೋರಿ ಸಂತ್ರಸ್ತೆ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮುಕ್ತಾ ಗುಪ್ತಾ ಹಾಗೂ ಪೂನಂ.ಎ. ಬಾಂಬಾ ಅವರ ದ್ವಿಸದಸ್ಯ ಪೀಠವು ಈ ಮಾರ್ಪಾಡು ಆದೇಶವನ್ನು ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.