ಬಹರಾಯಿಚ್ (ಉತ್ತರಪ್ರದೇಶ) (ಪಿಟಿಐ): ಉತ್ತರಪ್ರದೇಶದಲ್ಲಿರುವ 4 ಸಾವಿರಕ್ಕೂ ಅಧಿಕ ಅನುದಾನರಹಿತ ಮದರಾಸಗಳಿಗೆ ಹಣಕಾಸು ನೆರವು ನೀಡುತ್ತಿರುವ ಮೂಲಗಳ ಬಗ್ಗೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆ ಆರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶಕಿ ಜೆ. ರೀಭಾ ಅವರು ಅನುದಾನರಹಿತ ಮದರಸಾಗಳಿಗೆ ದೊರೆಯುತ್ತಿರುವ ಹಣಕಾಸು ಮೂಲಗಳ ಬಗ್ಗೆ ಮಾಹಿತಿ ಒದಗಿಸುವಂತೆ ರಾಜ್ಯದ ಎಲ್ಲ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ಅಕ್ಟೋಬರ್ 21ರಂದು ಪತ್ರ ಬರೆದಿದ್ದಾರೆ.
‘ಎಟಿಎಸ್‌ನ ಪೊಲೀಸ್ ಮಹಾನಿರ್ದೇಶಕರಿಗೆ 4,191 ಅನುದಾನ ರಹಿತ ಮದರಸಾಗಳ ಪಟ್ಟಿ ನೀಡಲಾಗಿದೆ. ಈ ಮದರಸಾಗಳಿಗೆ ಧನಸಹಾಯದ ಕುರಿತು ತನಿಖೆ ನಡೆಸಿ ವರದಿಗಳನ್ನು ಕಳುಹಿಸುವಂತೆ ಎಟಿಎಸ್ ತನಿಖಾಧಿಕಾರಿಗಳು ಕೇಳಿದ್ದಾರೆ’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಬಹರಾಯಿಚ್‌ನಲ್ಲೇ 495 ಮದರಾಸಗಳಿದ್ದು, ಅದರಲ್ಲಿ ಕನಿಷ್ಠ 100 ಮದರಾಸಗಳು ಭಾರತ–ನೇಪಾಳ ಗಡಿಭಾಗದ ಗ್ರಾಮಗಳಲ್ಲಿವೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಸಂಜಯ್ ಮಿಶ್ರಾ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.