ADVERTISEMENT

UP bypolls: 7 ಕ್ಷೇತ್ರಗಳಿಗೆ BJP, 8 ಕ್ಷೇತ್ರಗಳಿಗೆ BSP ಅಭ್ಯರ್ಥಿ ಘೋಷಣೆ

ಪಿಟಿಐ
Published 24 ಅಕ್ಟೋಬರ್ 2024, 10:39 IST
Last Updated 24 ಅಕ್ಟೋಬರ್ 2024, 10:39 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಲಖನೌ: ಉಪಚುನಾವಣೆ ನಡೆಯಲಿರುವ ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಿಗೆ ಗುರುವಾರ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ.

ಕುಂದರ್ಕಿ ಕ್ಷೇತ್ರದಿಂದ ರಾಮ್‌ವೀರ್ ಸಿಂಗ್ ಠಾಕೂರ್, ಗಾಜಿಯಾಬಾದ್‌ನಿಂದ ಸಂಜೀವ್ ಶರ್ಮಾ, ಖೈರ್ ಮೀಸಲು ಕ್ಷೇತ್ರದಿಂದ ಸುರೇಂದ್ರ ದಿಲೇರ್ ಮತ್ತು ಕರ್ಹಾಲ್‌ನಿಂದ ಅನುಜೇಶ್ ಯಾದವ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಫುಲ್ಪುರ್ ಕ್ಷೇತ್ರಕ್ಕೆ ದೀಪಕ್ ಪಟೇಲ್, ಕಾಟೇಹಾರಿಗೆ ಧರ್ಮರಾಜ್ ನಿಶಾದ್ ಮತ್ತು ಮಜವಾನ್‌ಗೆ ಸುಚಿಸ್ಮಿತಾ ಮೌರ್ಯ ಅವರನ್ನು ಆಯ್ಕೆ ಮಾಡಿದೆ.

ಉಳಿದ ಎರಡು ಕ್ಷೇತ್ರಗಳನ್ನು ಬಿಜೆಪಿಯು ತನ್ನ ಮಿತ್ರಪಕ್ಷಗಳಿಗೆ ಬಿಟ್ಟುಕೊಡುವ ಸಾಧ್ಯತೆಯಿದೆ.

ಇಂಡಿಯಾ ಮೈತ್ರಿಕೂಟದ ಬೆಂಬಲದೊಂದಿಗೆ ಎಲ್ಲಾ 9 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಸಮಾಜವಾದಿ ಪಕ್ಷ ಘೋಷಿಸಿದೆ.

ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದೆ.

ನವೆಂಬರ್ 13ರಂದು ಉಪಚುನಾವಣೆ ನಡೆಯಲಿದ್ದು, ನ.23ಕ್ಕೆ ಮತ ಎಣಿಕೆ ನಡೆಯಲಿದೆ.

ಬಿಎಸ್‌ಪಿಯಿಂದ 8 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

9 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಎಸ್‌ಪಿಯು ಇಂದು 8 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಕತೇಹಾರಿ ಕ್ಷೇತ್ರದಿಂದ ಅಮಿತ್ ವರ್ಮಾ, ಮೀರಾಪುರದಿಂದ ಶಹನಾಜ್‌, ಫುಲ್ಪುರ್ ಕ್ಷೇತ್ರದಿಂದ ಜೀತೇಂದ್ರ ಕುಮಾರ್ ಸಿಂಗ್‌, ಸಿಸಾಮೌನಿಂದ ವೀರೇಂದ್ರ ಕುಮಾರ್ ಶುಕ್ಲಾ, ಕರ್ಹಾಲ್‌ನಿಂದ ಡಾ.ಅವಿನಾಶ್ ಕುಮಾರ್ ಶಕ್ಯಾ, ಕುಂದರ್ಕಿಯಿಂದ ರಫತುಲ್ಲಾ, ಗಾಜಿಯಾಬಾದ್‌ನಿಂದ ಪರಮಾನಂದ್‌ ಗಾರ್ಗ್ ಹಾಗೂ ಮಜಾಹವಾನ್‌ನಿಂದ ದೀಪಕ್ ತಿವಾರಿ ಅವರನ್ನು ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.