ADVERTISEMENT

ಉ.ಪ್ರದೇಶ: ಭಯೋತ್ಪಾದಕರಿಗೆ ವರ್ಚುವಲ್ ಐಡಿ ಮಾಡಿಕೊಡುತ್ತಿದ್ದ ಜೆಇಎಂ ಉಗ್ರನ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2022, 9:38 IST
Last Updated 14 ಆಗಸ್ಟ್ 2022, 9:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್), ಭಾನುವಾರ ಜೈಷ್–ಎ–ಮೊಹಮ್ಮದ್ (ಜೆಇಎಂ) ಉಗ್ರನನ್ನು ಬಂಧಿಸಿದೆ.

ಉಗ್ರ ಹಬೀಬುಲ್ ಇಸ್ಲಾಂ ಅಲಿಯಾಸ್ ಸೈಫುಲ್ಲಾನನ್ನು ಕಾನ್ಪುರದಲ್ಲಿ ಬಂಧಿಸಲಾಗಿದೆ.

ಶುಕ್ರವಾರ ಸಹರಾನ್‌ಪುರದಲ್ಲಿ ಎಟಿಎಸ್‌ ಬಂಧಿತ ಮೊಹಮ್ಮದ್ ನದೀಮ್ ನೀಡಿದ ಸುಳಿನ ಮೇರೆಗೆ ಸೈಫುಲ್ಲಾನನ್ನು ಬಂಧಿಸಲಾಯಿತು.

ಈತ ವರ್ಚುವಲ್ ಐಡಿಗಳನ್ನು ತಯಾರಿಸುವುದರಲ್ಲಿ ನಿಸ್ಸೀಮನಾಗಿದ್ದು, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ಭಯೋತ್ಪಾದಕರಿಗಾಗಿ 50ಕ್ಕೂ ಹೆಚ್ಚು ವರ್ಚುವಲ್ ಐಡಿಗಳನ್ನು ನಿರ್ಮಿಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.