ADVERTISEMENT

ಭಾರತದ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಾಕ್‌ನ ಐಎಸ್‌ಐ ಏಜೆಂಟ್ ಬಂಧನ

ಪಿಟಿಐ
Published 4 ಫೆಬ್ರುವರಿ 2024, 9:32 IST
Last Updated 4 ಫೆಬ್ರುವರಿ 2024, 9:32 IST
<div class="paragraphs"><p>ಸತೇಂದ್ರ ಸಿವಾಲ್</p></div>

ಸತೇಂದ್ರ ಸಿವಾಲ್

   

ಎಎನ್‌ಐ ಎಕ್ಸ್ ಖಾತೆಯ ಚಿತ್ರ 

ಲಖನೌ: ರಷ್ಯಾ ರಾಜಧಾನಿ ಮಾಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಪಾಕಿಸ್ತಾನದ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಉತ್ತರ ಪ್ರದೇಶದ ಶಹ್ಮಾಹೀದ್ದಿನ್‌ಪುರ ಹಳ್ಳಿಯ ಸತೇಂದ್ರ ಸಿವಾಲ್ ಎಂಬವನನ್ನು ಲಖನೌ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ

2021ರಿಂದ ರಾಯಭಾರ ಕಚೇರಿಯ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಆತ ಐಎಸ್‌ಐ ನಿರ್ವಾಹಕರ ಜಾಲದ ಮೂಲಕ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದು ಎಟಿಎಸ್ ಅಧಿಕಾರಿಗಳು ನಡೆಸಿದ ಎಲೆಕ್ಟ್ರಾನಿಕ್ಸ್ ಮತ್ತು ಭೌತಿಕ ತನಿಖೆಗಳಲ್ಲಿ ತಿಳಿದು ಬಂದಿದೆ. ಪ್ರಮಖವಾಗಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ಮಿಲಿಟರಿ ಕುರಿತಂತೆ ಕಾರ್ಯತಂತ್ರದ ಪ್ರಮುಖ ಮಾಹಿತಿಗಳನ್ನು ಹಣ ಪಡೆದು ಐಎಸ್‌ಐಗೆ ನೀಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಮೀರತ್‌ನ ಎಟಿಎಸ್ ಅಧಿಕಾರಿಗಳು ಸಿವಾಲ್‌ಗೆ ಸಮನ್ಸ್ ನೀಡಿ ಕರೆಸಿಕೊಂಡಿದ್ದರು. ವಿಚಾರಣೆ ವೇಳೆ ಆತನಿಂದ ತೃಪ್ತಿಕರ ಉತ್ತರ ಬರಲಿಲ್ಲ. ಬಳಿಕ, ತನ್ನ ಅಪರಾಧದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಲಖನೌದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಸಿವಾಲ್ ವಿರುದ್ಧ ಐಪಿಸಿ ಸೆಕ್ಷನ್ 121 ಎ, 1923ರ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.