ADVERTISEMENT

ಉತ್ತರ ಪ್ರದೇಶ | ಯುವತಿ ಅಪಹರಣ ಆರೋಪ: ಸಮಾಜವಾದಿ ಪಕ್ಷದ ನಾಯಕನ ವಿರುದ್ಧ ಪ್ರಕರಣ

ಪಿಟಿಐ
Published 30 ಸೆಪ್ಟೆಂಬರ್ 2024, 6:39 IST
Last Updated 30 ಸೆಪ್ಟೆಂಬರ್ 2024, 6:39 IST
ಅಪಹರಣ (ಪ್ರಾತಿನಿಧಿಕ ಚಿತ್ರ)
ಅಪಹರಣ (ಪ್ರಾತಿನಿಧಿಕ ಚಿತ್ರ)   

ಬಲ್ಲಿಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ  ಬಲ್ಲಿಯಾ ಜಿಲ್ಲೆಯಲ್ಲಿ 22 ವರ್ಷದ ಯುವತಿಯನ್ನು ಅಪಹರಣ ಮಾಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಎಸ್‌ಪಿ ನಾಯಕ ಶಂಭುನಾಥ್ ಯಾದವ್‌ ಅವರ ಮನೆಗೆ ಸೆ.25ರಂದು ಯುವತಿ ಭೇಟಿ ನೀಡಿದ್ದಳು. ಅಂದಿನಿಂದ ಆಕೆ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಶಂಭು ನಾಥ್‌ ಯಾದವ್‌ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪಂಕಜ್ ಯಾದವ್ ಅಲಿಯಾಸ್ ಅರ್ಪಿತ್ ಎನ್ನುವಾತನ ವಿರುದ್ಧ ಯುವತಿಯ ತಂದೆ ದೂರು ದಾಖಲಿಸಿದ್ದಾರೆ. ಶಂಭು ನಾಥ್ ಯಾದವ್ ನೆರವಿನೊಂದಿಗೆ ಪಂಕಜ್ ಯಾದವ್ ಯುವತಿಯನ್ನು ಅಪಹರಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.