ಲಖನೌ : ‘ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವಂತಹ ಸುದ್ದಿ ಅಥವಾ ಚಿತ್ರ, ತಪ್ಪು ಮಾಹಿತಿಗಳಿರುವ ವರದಿ ಪ್ರಕಟಣೆಯ ಪ್ರಕರಣಗಳನ್ನು ಗುರುತಿಸಿ ಆಯಾ ಮಾಧ್ಯಮ ಸಂಸ್ಥೆಗಳಿಂದ ಸ್ಪಷ್ಟನೆ ಪಡೆಯಬೇಕು‘ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಆ.16ರಂದು ಹೊರಡಿಸಿರುವ ಆದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರು, ‘ನಕಾರಾತ್ಮಕ’ ಸುದ್ದಿಗಳನ್ನು ಪಟ್ಟಿ ಮಾಡಿ, ಸಮಗ್ರ ದೂರು ಪರಿಹಾರ ವ್ಯವಸ್ಥೆಯಡಿ (ಐಜಿಆರ್‌ಎಸ್) ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಬೇಕು‘ ಎಂದು ಸೂಚಿಸಿದ್ದಾರೆ.
‘ಯಾವುದೇ ಮುದ್ರಣ ಮತ್ತು ಪ್ರಸಾರ ಮಾಧ್ಯಮಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುವಂತೆ ಮಾಹಿತಿಗಳನ್ನು ತಿರುಚಿರುವುದು, ತಪ್ಪು ಮಾಹಿತಿ ನೀಡಿರುವುದು, ನಕಾರಾತ್ಮಕ ಸುದ್ದಿ ಪ್ರಸಾರ ಮಾಡಿರುವುದು ಗಮನಕ್ಕೆ ಬಂದಲ್ಲಿ ಈ ಬಗ್ಗೆ ಆಯಾ ಮಾಧ್ಯಮ ಸಂಸ್ಥೆಗಳಿಂದ ಸ್ಪಷ್ಟನೆ ಪಡೆಯಬೇಕು‘ ಎಂದು ತಿಳಿಸಲಾಗಿದೆ.
ವಾರ್ತಾ ಮತ್ತು ಪ್ರಸಾರ ಇಲಾಖೆಯು ನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುವ ‘ನಕಾರಾತ್ಮಕ ಸುದ್ದಿಗಳನ್ನು’ ಗುರುತಿಸಿ ಪಟ್ಟಿ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ತ್ವರಿತವಾಗಿ ತನಿಖೆ ನಡೆಸುವುದೂ ಅಗತ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.