ADVERTISEMENT

ಜಿಪಿಎಸ್ ನೇವಿಗೇಷನ್ ಬಳಸಿ ಚಾಲನೆ, ನದಿಗೆ ಉರುಳಿದ ಕಾರು; ಮೂವರು ಸಾವು

ಪಿಟಿಐ
Published 24 ನವೆಂಬರ್ 2024, 13:43 IST
Last Updated 24 ನವೆಂಬರ್ 2024, 13:43 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಐಸ್ಟೋಕ್‌ ಚಿತ್ರ

ಬರೇಲಿ (ಉತ್ತರ ಪ್ರದೇಶ): ಜಿಪಿಎಸ್‌ ನೇವಿಗೇಷನ್ ನಿರ್ದೇಶನ ಬಳಸಿ ಚಾಲನೆ ಮಾಡುತ್ತಿದ್ದ ಕಾರೊಂದು ದಾರಿ ತಪ್ಪಿ ರಾಮಗಂಗಾ ನದಿಗೆ ಬಿದ್ದು ಮೂರು ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇಂದು (ಭಾನುವಾರ) ಬೆಳಿಗ್ಗೆ 10 ಗಂಟೆ ಸುಮಾರಿಗೆ ಖಲ್ಪುರ್‌–ದತಗಂಜ್‌ ರಸ್ತೆ ಬಳಿ ಈ ಅವಘಡ ಸಂಭವಿಸಿದೆ. ಪ್ರಯಾಣಿಕರು ಬರೇಲಿಯಿಂದ ಬದೌನ್‌ ಜಿಲ್ಲೆಯ ದತಗಂಜ್‌ಗೆ ತೆರಳುತ್ತಿದ್ದರು ಎಂದು ಅವರು ಹೇಳಿದ್ದಾರೆ.

‘ಇದೇ ವರ್ಷದ ಆರಂಭದಲ್ಲಿ ಪ್ರವಾಹದಿಂದಾಗಿ ನದಿಯ ಸೇತುವೆಯ ಒಂದು ಭಾಗ ಕುಸಿದಿತ್ತು. ಅದನ್ನು ದುರಸ್ತಿಗೊಳಿಸಿರಲಿಲ್ಲ. ಹಾನಿಗೊಳಗಾದ ಸೇತುವೆ ಸಮೀಪದಲ್ಲಿ ಯಾವುದೇ ಸುರಕ್ಷತಾ ಅಥವಾ ಎಚ್ಚರಿಗೆ ಫಲಕಗಳಿರಲಿಲ್ಲ. ನೇವಿಗೇಷನ್ ಆಧರಿಸಿ ಕಾರು ಚಲಾಯಿಸಿದ್ದ ಚಾಲಕ, ಸೇತುವೆ ಹಾನಿಗೊಳಗಾಗಿರುವುದು ತಿಳಿಯದೆ ಸೇತುವೆ ಮೇಲೆ ತೆರಳಿದ್ದಾನೆ. ಈ ವೇಳೆ ಕಾರು ನದಿಗೆ ಬಿದ್ದಿದ್ದೆ’ ಎಂದು ಅಧಿಕಾರಿ ಅಶುತೋಷ್ ಶಿವಂ ತಿಳಿಸಿದ್ದಾರೆ.

ಮಾಹಿತಿ ಪಡೆದ ಫರೀದ್‌ಪುರ, ಬರೇಲಿ ಮತ್ತು ದತಗಂಜ್‌ ಪೊಲೀಸ್‌ ಠಾಣೆಯ ಪೊಲೀಸ್‌ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ನದಿಯಿಂದ ವಾಹನವನ್ನು ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.