ADVERTISEMENT

ಜಪ್ತಿಯಾದ ಮದ್ಯ ಖಾಲಿಯಾಗಲು ಇಲಿಗಳು ಕಾರಣ: ಉತ್ತರ ಪ್ರದೇಶ ಪೊಲೀಸರ ಆರೋಪ

ಪಿಟಿಐ
Published 28 ಮಾರ್ಚ್ 2021, 16:02 IST
Last Updated 28 ಮಾರ್ಚ್ 2021, 16:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಟವಾ, ಉತ್ತರ ಪ್ರದೇಶ: ಇಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜಪ್ತಿ ಮಾಡಿ ಇರಿಸಿದ್ದ ಅಕ್ರಮ ಮದ್ಯ ನಾಪತ್ತೆ ಪ್ರಕರಣದಲ್ಲಿ ಇಲಿಗಳ ಕೈವಾಡವಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ ಬಳಿಕ ತನಿಖೆಗೆ ಆದೇಶಿಸಲಾಗಿದೆ.

ಕೊತ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿ ಇರಿಸಿದ್ದ ಅಕ್ರಮ ಮದ್ಯದಲ್ಲಿ 1,400 ಕಾರ್ಟ್‌ಗಳು ಕಾಣೆಯಾಗಿವೆ. ಈ ಬಗ್ಗೆ ಠಾಣೆಯ ಅಧಿಕಾರಿ ಇಂದ್ರೇಶ್‌ಪಾಲ್ ಸಿಂಗ್ ಮತ್ತು ಕ್ಲರ್ಕ್ ರಿಶಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.

ಅಲ್ಲದೆ, ಪೊಲೀಸ್ ಠಾಣೆಯಲ್ಲಿನ ಡೈರಿ ಪ್ರಕಾರ 239 ಕಾರ್ಟ್‌ ಮದ್ಯ ನಾಪತ್ತೆಯಾಗಿದೆ. ಅದಕ್ಕೆ ಇಲಿಗಳು ಕಾರಣ ಎನ್ನಲಾಗಿದೆ. ಆದರೆ ಇದು ವಿಚಿತ್ರವಾಗಿದೆ ಮತ್ತು ನಂಬಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ADVERTISEMENT

ಇಟವಾದ ಎಸ್‌ಪಿ ಉದಯ್ ಶಂಕರ್ ಸಿಂಗ್ ಈ ಸಂಗತಿಯನ್ನು ದೃಢಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಜತೆಗೆ ಮತ್ತೋರ್ವ ಪೊಲೀಸ್ ಅಧಿಕಾರಿ ಕೂಡ ಈ ಬಗ್ಗೆ ಪಿಟಿಐಗೆ ಹೇಳಿಕೆ ನೀಡಿದ್ದು, ಜಪ್ತಿಯಾದ ಅಕ್ರಮ ಮದ್ಯ ಪೈಕಿ, 1450 ಕಾರ್ಟ್‌ಗಳು ಕಾಣೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.