ಲಖನೌ: ಬೀಡಾಡಿ ದನಗಳಿಗೆ ಬೆಳಕನ್ನು ಪ್ರತಿಫಲಿಸುವ ಪಟ್ಟಿಗಳನ್ನು ಅಳವಡಿಸುವ ಮೂಲಕ, ಜಾನುವಾರುಗಳಿಂದಾಗಿ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ, ಬೀಡಾಡಿ ದನಗಳಿಂದಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.
ಬೀಡಾಡಿ ದನಗಳಿಗೆ ಈ ವಿಶೇಷ ಪಟ್ಟಿಗಳನ್ನು ಅಳವಡಿಸಿದಾಗ, ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಅವುಗಳಿಂದ ಬೆಳಕು ಹೊರಹೊಮ್ಮುತ್ತದೆ. ಚಾಲಕರಿಗೆ ದೂರದಿಂದಲೇ ಜಾನುವಾರುಗಳು ಕಾಣಿಸುತ್ತವೆ ಹಾಗೂ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದೂ ಮೂಲಗಳು ತಿಳಿಸಿವೆ.
‘ಬೀಡಾಡಿ ದನಗಳ ಕುತ್ತಿಗೆ ಮತ್ತು ಕೊಂಬುಗಳಿಗೆ ಬೇರೆ ಬೇರೆ ಬಣ್ಣದ ಬೆಳಕು ಪ್ರತಿಫಲಕ ಪಟ್ಟಿಗಳನ್ನು ಅಳವಡಿಸಲಾಗುತ್ತದೆ. ಸಣ್ಣ ಮತ್ತು ದೊಡ್ಡ ಪಟ್ಟಣಗಳಲ್ಲಿನ ಬೀಡಾಡಿ ದನಗಳಿಗೆ ಇಂತಹ ಪಟ್ಟಿಗಳ ಅಳವಡಿಕೆ ಕಾರ್ಯ ಈಗಾಗಲೇ ಆರಂಭಗೊಂಡಿದೆ’ ಎಂದು ಪಶುಪಾಲನಾ ಇಲಾಖೆ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.