ಲಖನೌ : ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 813 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಸಮಾಜವಾದಿ ಪಕ್ಷ 191 ಹಾಗೂ ಬಿಎಸ್‌ಪಿ 85 ಸ್ಥಾನಗಳನ್ನು ಗೆದ್ದುಕೊಂಡಿವೆ.
ರಾಜ್ಯದ 75 ಜಿಲ್ಲೆಗಳ 760 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 1,420 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಜೌನ್‌ಪುರ ಜಿಲ್ಲೆಯ ಖೇತ್‌ಸರಾಯ್ ನಗರ ಪಾಲಿಕೆಯ ಅಧ್ಯಕ್ಷ ಸ್ಥಾನದ ಫಲಿತಾಂಶವನ್ನು ರಾಜ್ಯ ಚುನಾವಣಾ ಆಯೋಗ ತಡೆಹಿಡಿದಿದೆ.
ವಾರಾಣಸಿ, ಲಖನೌ, ಆಯೋಧ್ಯಾ, ಪ್ರಯಾಗ್‌ರಾಜ್ ಸೇರಿದಂತೆ 17 ಮಹಾನಗರ ಪಾಲಿಕೆಗಳ ಮೇಯರ್ ಸ್ಥಾನಗಳನ್ನು ಕೂಡ ಬಿಜೆಪಿ ತನ್ನದಾಗಿಸಿಕೊಂಡಿದೆ.
ಕಾಂಗ್ರೆಸ್ ಪಕ್ಷ 77 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಎಐಎಂಐಎಂ– 19, ರಾಷ್ಟ್ರೀಯ ಲೋಕದಳ– 10, ಆಮ್ ಆದ್ಮಿ ಪಾರ್ಟಿ– 8, ಆಜಾದ್ ಸಮಾಜ್ ಪಾರ್ಟಿ (ಕಾಶ್ಶಿರಾಮ್)– 5 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಜನ ಅಧಿಕಾರ ಪಾರ್ಟಿ, ಪೀಸ್ ಪಾರ್ಟಿ ಹಾಗೂ ನಿಶಾದ್ ಪಾರ್ಟಿ ತಲಾ ಒಂದು ಸ್ಥಾನ ಗೆದ್ದುಕೊಂಡಿವೆ.
199 ನಗರ ಪಾಲಿಕೆಗಳ ಅಧ್ಯಕ್ಷ ಸ್ಥಾನಗಳಲ್ಲಿ ಬಿಜೆಪಿ 89 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, 41 ಪಕ್ಷೇತರರು ಗೆದ್ದಿದ್ದಾರೆ. ಸಮಾಜವಾದಿ ಪಕ್ಷ–35, ಬಿಎಸ್‌ಪಿ–16, ಆರ್‌ಎಲ್‌ಡಿ– 7, ಕಾಂಗ್ರೆಸ್–4, ಎಎಪಿ ಹಾಗೂ ಎಐಎಂಐಎಂ ತಲಾ ಮೂರು, ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳ ಒಂದು ಸ್ಥಾನದಲ್ಲಿ ಜಯ ಗಳಿಸಿವೆ.
ನಗರ ಪಾಲಿಕೆಗಳ 5,327 ಸ್ಥಾನಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳು 3,130 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ 1,360 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿರುವ ಸಮಾಜವಾದಿ ಪಕ್ಷ– 425, ಬಿಎಸ್‌ಪಿ–191, ಕಾಂಗ್ರೆಸ್–91, ಆರ್‌ಎಲ್‌ಡಿ–40, ಎಐಎಂಐಎ–33 ಹಾಗೂ ಎಎಪಿ 30 ಸ್ಥಾನಗಳನ್ನು ಗೆದ್ದುಕೊಂಡಿವೆ.
ನಗರ ಪಂಚಾಯಿತಿಗಳ 544 ಅಧ್ಯಕ್ಷ ಸ್ಥಾನಗಳ ಪೈಕಿ 191 ಸ್ಥಾನಗಳು ಬಿಜೆಪಿ ಪಾಲಾಗಿವೆ. ಪಕ್ಷೇತರರು 195 ಸ್ಥಾನಗಳಲ್ಲಿ ಗೆದ್ದಿದ್ದರೆ, ಸಮಾಜವಾದಿ ಪಕ್ಷ– 78, ಬಿಎಸ್‌ಪಿ–37 ಹಾಗೂ ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆದ್ದಿದೆ.
ಸ್ಥಳೀಯ ಸಂಸ್ಥೆಗಳ ಒಟ್ಟು 14,522 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 83,378 ಅಭ್ಯರ್ಥಿಗಳು ಕಣದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.