ADVERTISEMENT

UPSC Result 2023 | 180 ಐಎಎಸ್; 200 ಐಪಿಎಸ್‌: ಪಟ್ಟಿ ಇಲ್ಲಿದೆ

ಪಿಟಿಐ
Published 16 ಏಪ್ರಿಲ್ 2024, 9:42 IST
Last Updated 16 ಏಪ್ರಿಲ್ 2024, 9:42 IST
ಯುಪಿಎಸ್‌ಸಿ ಫಲಿತಾಂಶ ಪ್ರಕಟ
ಯುಪಿಎಸ್‌ಸಿ ಫಲಿತಾಂಶ ಪ್ರಕಟ   

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2023ರ ಸೆಪ್ಟೆಂಬರ್‌ನಲ್ಲಿ ನಡೆಸಿದ್ದ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಇಂದು (ಮಂಗಳವಾರ) ಪ್ರಕಟಿಸಿದೆ.

ಪರೀಕ್ಷೆಯಲ್ಲಿ ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ ಪ್ರಥಮ ಸ್ಥಾನ ಪಡೆದಿದ್ದಾರೆ. ಅನಿಮೇಶ್‌ ಪ್ರಧಾನ್‌ ದ್ವಿತೀಯ ಹಾಗೂ ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನ ಗಳಿಸಿದ್ದಾರೆ.

ಒಟ್ಟು 1,016 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅವರನ್ನು ಕೇಂದ್ರದ ವಿವಿಧ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

ADVERTISEMENT

ಫಲಿತಾಂಶವನ್ನು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಎಂದು ಆಯೋಗ ಹೇಳಿದೆ.

ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್‌) ಸೇರಿದಂತೆ ಇತರ ಸೇವೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನವನ್ನು ಕೇಂದ್ರ ಲೋಕಸೇವಾ ಆಯೋಗ ನಡೆಸುತ್ತದೆ.

ಸೇವೆ ಸಾಮಾನ್ಯಆರ್ಥಿಕವಾಗಿ ದುರ್ಬಲ ವರ್ಗಹಿಂದುಳಿದ ವರ್ಗಪರಿಶಿಷ್ಟ ಜಾತಿಪರಿಶಿಷ್ಟ ಪಂಗಡಒಟ್ಟು
ಐಎಎಸ್‌7317492714180
ಐಎಫ್‌ಎಸ್‌ 164105237
ಐಪಿಎಸ್‌8020553213200
ಎ ವೃಂದದ ಕೇಂದ್ರ ಸೇವೆ258641608645613
ಬಿ ವೃಂದದ ಕೇಂದ್ರ ಸೇವೆ4710291512110
ಒಟ್ಟು474115303165861016

ಕೇಂದ್ರ ಲೋಕಸೇವಾ ಆಯೋಗವು ಒಟ್ಟು 1016 ಹುದ್ದೆಗಳಿಗೆ 2023ರಲ್ಲಿ ಪರೀಕ್ಷೆ ನಡೆಸಿತ್ತು. ಇದರಲ್ಲಿ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಹಾಗೂ ಎ ಹಾಗೂ ಬಿ ವೃಂದದ ಕೇಂದ್ರ ಸೇವೆಗಳ ಹುದ್ದೆಗಳು ಸೇರಿದ್ದವು.

ಇದರಲ್ಲಿ ಸಾಮಾನ್ಯ ವರ್ಗದಿಂದ 347, ಆರ್ಥಿಕವಾಗಿ ದುರ್ಬಲ ವರ್ಗದಿಂದ 115, ಹಿಂದುಳಿದ ವರ್ಗದಿಂದ 303, ಪರಿಶಿಷ್ಟ ಜಾತಿ 165, ಪರಿಶಿಷ್ಟ ಪಂಗಡ 86 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಪಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.