ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2021–22ನೇ ಸಾಲಿನಲ್ಲಿ ವಿವಿಧ ಸರ್ಕಾರಿ ಉದ್ಯೋಗಗಳಿಗೆ ಕೇವಲ 4,119 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ ಅತಿ ಕಡಿಮೆ ಸಂಖ್ಯೆ ಎಂದು ಸಿಬ್ಬಂದಿ ಸಚಿವಾಲಯ ಬುಧವಾರ ಅಂಕಿ ಅಂಶವನ್ನು ಲೋಕಸಭೆಗೆ ತಿಳಿಸಿದೆ.
‘ಪ್ರತಿ ವರ್ಷ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಗಳನ್ನು ವೇಳಾಪಟ್ಟಿ ಪ್ರಕಾರ ನಡೆಸುತ್ತದೆ’ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲಿಖಿತ ಉತ್ತರ ನೀಡಿದ್ದಾರೆ.
2021–22ರಲ್ಲಿ 5,153 ಹುದ್ದೆಗಳಿಗೆ 4,119 ಅಭ್ಯರ್ಥಿ ಹಾಗೂ 2020–21ರಲ್ಲಿ 4,214, 2019–20ರಲ್ಲಿ 5,320 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ. ಅದೇ ರೀತಿ 2018ರಲ್ಲಿ 5,207 ಹುದ್ದೆಗಳಿಗೆ 4,399 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿತ್ತು.
ಅಂಕಿ ಅಂಶ ಪ್ರಕಾರ2017–18ರಲ್ಲಿ 6,294, 2016–17ರಲ್ಲಿ 5,735, 2015–16ರಲ್ಲಿ 6,866, 2014–15ರಲ್ಲಿ 8,272, 2013–14ರಲ್ಲಿ 8,852, 2012–13ರಲ್ಲಿ 5,705 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.