ತುಳಸೇಂದ್ರಪುರ (ತ.ನಾಡು): ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದ್ದು, ಯಾರು ವಿಜಯಶಾಲಿಯಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.
ಅತ್ತ ಕಮಲಾ ಹ್ಯಾರಿಸ್ ಅವರ ಪೂರ್ವಜರು ವಾಸವಿದ್ದ ತಮಿಳುನಾಡಿನ ತುಳಸೇಂದ್ರಪುರದಲ್ಲಿ ಭಾರತೀಯ ಸಂಜಾತೆಯ ಗೆಲುವಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ವಾಷಿಂಗ್ಟನ್‌ನಿಂದ ಸುಮಾರು 13,000 ಕಿ.ಮೀ. ದೂರದ ಕಮಲಾ ಹ್ಯಾರಿಸ್ ಪೂರ್ವಜರ ಊರಲ್ಲೂ ಚುನಾವಣಾ ಕಾವೇರಿದೆ.
ಕಮಲಾ ಹ್ಯಾರಿಸ್ ಗೆಲುವಿಗಾಗಿ ಗ್ರಾಮದ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕಮಲಾ ಗೆದ್ದರೆ ಸಂಭ್ರಮಾಚರಣೆಯನ್ನು ಮಾಡಲಿದ್ದೇವೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಹಳ್ಳಿಯಲ್ಲಿ ಕಮಲಾ ಹ್ಯಾರಿಸ್ ಗೆಲುವಿಗಾಗಿ ಶುಭಹಾರೈಸಿ ಪೋಸ್ಟರ್ ಕೂಡ ಲಗತ್ತಿಸಲಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇಂದು (ನ.5) ಮತದಾನ ನಡೆಯಲಿದೆ. ಒಂದು ವೇಳೆ ಅಮೆರಿಕ ಚುನಾವಣೆಯಲ್ಲಿ ಹ್ಯಾರಿಸ್ ಗೆದ್ದರೆ, ಅಮೆರಿಕದ ಅಧ್ಯಕ್ಷರಾಗುವ ಮೊದಲ ಮಹಿಳೆ, ಮೊದಲ ಕಪ್ಪು ಜನಾಂಗದ ಮಹಿಳೆ ಮತ್ತು ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಎನಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.