ADVERTISEMENT

ದೆಹಲಿಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್

ಪಿಟಿಐ
Published 10 ನವೆಂಬರ್ 2023, 2:54 IST
Last Updated 10 ನವೆಂಬರ್ 2023, 2:54 IST
<div class="paragraphs"><p>ದೆಹಲಿಗೆ ಬಂದ ಆ್ಯಂಟನಿ ಬ್ಲಿಂಕನ್‌</p></div>

ದೆಹಲಿಗೆ ಬಂದ ಆ್ಯಂಟನಿ ಬ್ಲಿಂಕನ್‌

   

– ಟ್ವಿಟರ್ ಚಿತ್ರ (@MEAIndia)

ನವದೆಹಲಿ: ವಿದೇಶಾಂಗ ಸಚಿವ ಹಾಗೂ ರಕ್ಷಣಾ ಸಚಿವರೊಂದಿಗೆ ನಡೆಯುವ 2+2 ಮಾತುಕತೆಗಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಅವರು ಗುರುವಾರ ರಾತ್ರಿ ಇಲ್ಲಿಗೆ ಆಗಮಿಸಿದರು.

ADVERTISEMENT

ಇಂದು (ಶುಕ್ರವಾರ) 2+2 ಮಾತುಕತೆ ನಡೆಯಲಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್‌ ಈಗಾಗಲೇ ದೆಹಲಿಯಲ್ಲಿ ಇದ್ದಾರೆ.

ಭಾರತದ ಕಡೆಯಿಂದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ವಿದೇಶಾಂಗ ಇಲಾಖೆಯ ಸಚಿವ ಜೈ ಶಂಕರ್‌ ಅವರು ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ.

‘ಭಾರತ ಹಾಗೂ ಅಮೆರಿಕ ನಡುವೆ ಸಚಿವರ 2+2 ಮಾತುಕತೆಗೆ ದೆಹಲಿಗೆ ಬಂದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್‌ ಅವರಿಗೆ ಸ್ವಾಗತ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅವರ ಈ ಭೇಟಿಯಿಂದಾಗಿ ಭಾರತ ಹಾಗೂ ಅಮೆರಿಕ ನಡುವಣ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.