ADVERTISEMENT

ಸಂತೂರ್‌ ಮಾಂತ್ರಿಕನ ಕೊನೆಯ ಪಯಣ; ಹೆಗಲು ಕೊಟ್ಟ ತಬಲಾ ಸಾಥಿ ಝಾಕಿರ್ ಹುಸೇನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 13:20 IST
Last Updated 13 ಮೇ 2022, 13:20 IST
ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರ ಪಾರ್ಥಿವ ಶರೀರಕ್ಕೆ ಝಾಕಿರ್ ಹುಸೇನ್ ಅವರು ಹೆಗಲು ಕೊಟ್ಟರು (ಟ್ವಿಟರ್ ಚಿತ್ರ)
ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರ ಪಾರ್ಥಿವ ಶರೀರಕ್ಕೆ ಝಾಕಿರ್ ಹುಸೇನ್ ಅವರು ಹೆಗಲು ಕೊಟ್ಟರು (ಟ್ವಿಟರ್ ಚಿತ್ರ)    

ಮುಂಬೈ: ಖ್ಯಾತ ಸಂತೂರ್ ವಾದಕ ಮತ್ತು ಸಂಗೀತ ನಿರ್ದೇಶಕ ಪಂಡಿತ್ ಶಿವಕುಮಾರ್ ಶರ್ಮಾ ಅವರ ಅಂತ್ಯಕ್ರಿಯೆ ನಗರದ ವಿಲೇಪಾರ್ಲೆಯಲ್ಲಿರುವ ಪವನ್ ಹನ್ಸ್ ರುದ್ರಭೂಮಿಯಲ್ಲಿ ಶುಕ್ರವಾರ ನೆರವೇರಿತು.

ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು ಸೇರಿದಂತೆ ಸ್ನೇಹಿತರು, ಅಭಿಮಾನಿಗಳು ಭಾಗವಹಿಸಿದ್ದರು.

ಶಿವಕುಮಾರ್ ಶರ್ಮಾಮತ್ತು ತಬಲಾ ಮಾಂತ್ರಿಕ ಉಸ್ತಾದ್ ಝಾಕಿರ್ಹುಸೇನ್ ಅವರು ಹಲವು ದಶಕಗಳಿಂದ ಸ್ನೇಹಿತರಾಗಿದ್ದರು. ಅವರ ನಡುವೆ ಉತ್ತಮ ಬಾಂಧವ್ಯವಿತ್ತು.

ADVERTISEMENT

ಶಿವಕುಮಾರ್ ಶರ್ಮಾ ಮತ್ತು ಝಾಕಿರ್ಹುಸೇನ್ ಜೋಡಿ ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಮೋಡಿ ಮಾಡಿದ್ದರು.

ಸ್ನೇಹಿತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದ ಝಾಕಿರ್ಹುಸೇನ್, ಅಂತಿಮ ವಿಧಿವಿಧಾನಗಳು ಸೇರಿದಂತೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವವರೆಗೆ ಸ್ಥಳದಲ್ಲೇ ಬೀಡುಬಿಟ್ಟಿದ್ದರು.

ಕುಟುಂಬಸ್ಥರು, ಅಪ್ತರು, ಅಭಿಮಾನಿಗಳು ಶಿವಕುಮಾರ್ ಶರ್ಮಾ ಅಗಲಿಕೆಯಿಂದ ಮೌನಕ್ಕೆ ಶರಣದ ದೃಶ್ಯ ಮನಕಲಕುವಂತಿತ್ತು.

ಶಿವಕುಮಾರ್ ಶರ್ಮಾ, ಮುಂಬೈನ ಪಾಲಿಹಿಲ್ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.