ADVERTISEMENT

ಯುಪಿ | ರೈಲ್ವೆ ಹಳಿ ಮೇಲೆ 25 ಅಡಿ ಉದ್ದದ ಕಬ್ಬಿಣದ ರಾಡ್ ಪತ್ತೆ: ತಪ್ಪಿದ ಅನಾಹುತ

ಪಿಟಿಐ
Published 24 ನವೆಂಬರ್ 2024, 13:53 IST
Last Updated 24 ನವೆಂಬರ್ 2024, 13:53 IST
<div class="paragraphs"><p>ರೈಲು ಹಳಿ</p></div>

ರೈಲು ಹಳಿ

   

Credit: Pixabay Photo

ಪಿಲಿಭಿತ್ (ಉತ್ತರ ಪ್ರದೇಶ): ಜಹಾನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಿಭಿತ್-ಬರೇಲಿ ರೈಲ್ವೆ ಹಳಿ ಮೇಲೆ ಇಟ್ಟಿದ್ದ 25 ಅಡಿ ಉದ್ದದ ಕಬ್ಬಿಣದ ರಾಡ್ ಅನ್ನು ರೈಲು ಚಾಲಕ ಪತ್ತೆಹಚ್ಚಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ADVERTISEMENT

‘ಲಾಲೂರಿ ಖೇಡಾ ನಿಲ್ದಾಣದ ಬಳಿ ಪಿಲಿಭಿತ್ –ಬರೇಲಿ ನಡುವೆ ಸಂಚರಿಸುವ ರೈಲು ಎಂಜಿನ್‌ಗೆ ಕಬ್ಬಿಣದ ರಾಡ್ ಬಡಿದ ಪರಿಣಾಮ ಕೆಲಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹಳಿ ಮೇಲೆ ಕಬ್ಬಿಣದ ರಾಡ್ ಇಟ್ಟಿರುವುದನ್ನು ಮನಗಂಡ ಚಾಲಕ ತಕ್ಷಣ ರೈಲು ನಿಲ್ಲಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ದೀಪಕ್ ಚತುರ್ವೇದಿ ತಿಳಿಸಿದ್ದಾರೆ.

ಜಹಾನಾಬಾದ್ ಮತ್ತು ಶಾಹಿ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಕ್ರಾಸಿಂಗ್ ಬಳಿ ಹಳಿ ಮೇಲೆ ಕಬ್ಬಿಣದ ರಾಡ್ ಇಡಲಾಗಿತ್ತು ಎಂದು ರೈಲ್ವೆ ವಿಭಾಗದ ಹಿರಿಯ ಎಂಜಿನಿಯರ್ ನೇತ್ರಾಪಾಲ್ ಸಿಂಗ್ ಹೇಳಿದ್ದಾರೆ.

ರೈಲು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ಕಿಡಿಗೇಡಿಗಳು ಪಿತೂರಿ ನಡೆಸಿದ್ದಾರೆ ಎಂದು ಸಿಂಗ್ ವಿವರಿಸಿದ್ದಾರೆ.

ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.