ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸುತ್ತಿರುವವರ ಪೈಕಿ ಶೇ 25ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರಾಗಿದ್ದಾರೆ.
586 ಅಭ್ಯರ್ಥಿಗಳ ಪೈಕಿ 584 ಮಂದಿ ಸಲ್ಲಿಸಿರುವ ಅಫಿಡವಿಟ್ ಅನ್ನು ಅಸೋಶಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಧ್ಯಯನ ಮಾಡಿ ವಿಶ್ಲೇಷಣೆ ಪ್ರಕಟಿಸಿದೆ.
ಅದರ ಪ್ರಕಾರ, 147 ಮಂದಿ ಕ್ರಿಮಿನಲ್ ಹಿನ್ನೆಲೆ ಇರುವ ಅಭ್ಯರ್ಥಿಗಳು ಎಂದು ವರದಿ ಹೇಳಿದೆ.
ಈ ಸಂಸ್ಥೆ ವಿಶ್ಲೇಷಣೆ ಮಾಡಿರುವ ಸಮಾಜವಾದಿ ಪಕ್ಷದ 52 ಅಭ್ಯರ್ಥಿಗಳ ಪೈಕಿ 35, ಕಾಂಗ್ರೆಸ್‌ನ 54ರ ಪೈಕಿ 23, ಬಿಎಸ್‌ಪಿಯ 55ರ ಪೈಕಿ 20, ಬಿಜೆಪಿಯ 53ರಲ್ಲಿ 18 ಮತ್ತು ಆರ್‌ಎಲ್‌ಡಿಯ 3ರಲ್ಲಿ 1 ಹಾಗೂ ಎಎಪಿಯ 49ರಲ್ಲಿ 7 ಮಂದಿ ತಮ್ಮ ಅಫಿಡವಿಟ್‌ನಲ್ಲಿ ಕ್ರಿಮಿನಲ್ ಪ್ರಕರಣ ಇರುವ ಕುರಿತು ಉಲ್ಲೇಖಿಸಿದ್ದಾರೆ.
ಎರಡನೇ ಹಂತದಲ್ಲಿ 55 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.