ADVERTISEMENT

ಎದೆಯ ಮೇಲೆ ಯೋಗಿಯ ಹಚ್ಚೆ; ಮುಸ್ಲಿಂ ಯುವಕನ ಅಭಿಮಾನ

ಐಎಎನ್ಎಸ್
Published 14 ಜೂನ್ 2022, 4:38 IST
Last Updated 14 ಜೂನ್ 2022, 4:38 IST
ಯೋಗಿ ಆದಿತ್ಯನಾಥ್‌ ಅವರ ಚಿತ್ರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಯುವಕ– ಚಿತ್ರ: ಟ್ವಿಟರ್‌
ಯೋಗಿ ಆದಿತ್ಯನಾಥ್‌ ಅವರ ಚಿತ್ರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಯುವಕ– ಚಿತ್ರ: ಟ್ವಿಟರ್‌   

ಲಖನೌ: ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಒಂದಿಲ್ಲೊಂದು ಕಾರಣಗಳಿಂದ ಕೋಮು ಸಂಘರ್ಷಗಳು ನಡೆಯುತ್ತಿವೆ. ಈ ಮಧ್ಯೆ ಮುಸ್ಲಿಂ ಯುವಕನೊಬ್ಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಚಿತ್ರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ತೋರಿದ್ದಾನೆ.

23 ವರ್ಷ ವಯಸ್ಸಿನ ಯಮೀನ್‌ ಸಿದ್ದಿಖಿ ತನ್ನ ಎದೆಯ ಮೇಲೆ ಯೋಗಿ ಆದಿತ್ಯನಾಥ್‌ ಅವರ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ. ಯೋಗಿ ತನ್ನ ಮಾದರಿ ವ್ಯಕ್ತಿ ಎಂದು ಹೇಳಿಕೊಂಡಿರುವ ಆತ, ಯೋಗಿ ಅವರ ಜನ್ಮದಿನ ಪ್ರಯುಕ್ತ ಹಚ್ಚೆ ಹಾಕಿಸಿಕೊಂಡಿದ್ದಾಗಿ ಹೇಳಿದ್ದಾನೆ.

ಉತ್ತರ ಪ್ರದೇಶದ ಮೈನ್ಪುರಿ ಮತ್ತು ಫರುಖಾಬಾದ್‌ ಜಿಲ್ಲೆಗಳ ಗಡಿ ಭಾಗದ ಹಳ್ಳಿಯಲ್ಲಿ ಸಿದ್ದಿಖಿ ವಾಸಿಸುತ್ತಿದ್ದು, ಪಾದರಕ್ಷೆಗಳ ವ್ಯಾಪಾರ ನಡೆಸುತ್ತಿದ್ದಾನೆ.

ADVERTISEMENT

ಯೋಗಿ ಅವರ ಹಚ್ಚೆ ಹಾಕಿಸಿಕೊಂಡಾಗಿನಿಂದ ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದರೂ, ಆ ಬಗ್ಗೆ ತಲೆ ಕಡೆಸಿಕೊಂಡಿಲ್ಲ ಎಂದು ಸಿದ್ದಿಖಿ ಹೇಳಿರುವುದಾಗಿ ವರದಿಯಾಗಿದೆ.

'ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿ ಮಾಡಿ, ಅವರಿಗೆ ಹಚ್ಚೆ ತೋರಿಸುವ ಆಸೆಯಿದೆ. ಅವರ ಮೇಲೆ ಅಪಾರ ಪ್ರೀತಿ ಮತ್ತು ಗೌರವವಿದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ಬದಲಾವಣೆ ತಂದಿದ್ದಾರೆ. ಹಿಂದೂ ಮತ್ತು ಮುಸ್ಲಿಮರು ಎಲ್ಲರೂ ಎಲ್ಲ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ, ಅದರಲ್ಲಿ ಯಾವುದೇ ತಾರತಮ್ಯ ಇಲ್ಲ' ಎಂದು ಸಿದ್ದಿಖಿ ಹೇಳಿದ್ದಾನೆ.

ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಈದ್ಗಾ ರೀತಿಯ ವಿವಾದಿತ ವಿಚಾರಗಳ ಬಗ್ಗೆ ಮಾತನಾಡಲು ಸಿದ್ದಿಖಿ ನಿರಾಕರಿಸಿದ್ದು, 'ಕೋರ್ಟ್ ಅದನ್ನು ನಿರ್ಧರಿಸುತ್ತದೆ' ಎಂದಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.