ಕಾನ್ಪುರ: ಇಲ್ಲಿನ ಪರೌಂಖ್ ಗ್ರಾಮದಲ್ಲಿರುವ ಪಥ್ರಿ ಮಠ ದೇವಾಲಯಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಭೇಟಿ ನೀಡಲಿದ್ದಾರೆ.
ಪರೌಂಖ್,ಕೋವಿಂದ್ ಅವರ ಪೂರ್ವಜರ ಊರಾಗಿದೆ.
ಕೇಂದ್ರ ಸರ್ಕಾರ ಬುಧವಾರ ಹೊರಡಿಸಿರುವ ಪ್ರಕಟಣೆ ಪ್ರಕಾರಕೋವಿಂದ್ ಹಾಗೂ ಮೋದಿ ಅವರುಮಧ್ಯಾಹ್ನ 2ರ ಹೊತ್ತಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ,ಮಧ್ಯಾಹ್ನ 2.15ರ ವೇಳೆಗೆ ಮಿಲನ ಕೇಂದ್ರಕ್ಕೆ (ಸಮುದಾಯ ಕೇಂದ್ರ)ಭೇಟಿ ನೀಡಲಿದ್ದಾರೆ.
ಮಿಲನ ಕೇಂದ್ರವು ಕೋವಿಂದ್ ಅವರ ಪೂರ್ವಜನರ ಮನೆಯಾಗಿದ್ದು, ಅದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಇಬ್ಬರೂ ಮಧ್ಯಾಹ್ನ 2.30ಕ್ಕೆ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಗುರುವಾರ ಪರೌಂಖ್‌ಗೆ ಆಗಮಿಸಿ, ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.
ಕೋವಿಂದ್ ಅವರು ಜೂನ್ 3ರಿಂದ 6ರ ವರೆಗೆ ಉತ್ತರಪ್ರದೇಶ ಭೇಟಿಯಲ್ಲಿರಲಿದ್ದಾರೆ ಎಂದು ರಾಷ್ಟ್ರಪತಿ ಭವನ ಗುರುವಾರ ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.