ADVERTISEMENT

ಪ್ರಶ್ನೆ ಪತ್ರಿಕೆ ಸೋರಿಕೆ: ಬಿಷಪ್ ಜಾನ್ಸನ್ ಕಾಲೇಜಿನ ಮಾಜಿ ಪ್ರಾಂಶುಪಾಲೆ ಬಂಧನ

ಪಿಟಿಐ
Published 27 ಸೆಪ್ಟೆಂಬರ್ 2024, 4:05 IST
Last Updated 27 ಸೆಪ್ಟೆಂಬರ್ 2024, 4:05 IST
<div class="paragraphs"><p>ಬಂಧನ</p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಲಖನೌ: ಪರಿಶೀಲನಾ ಅಧಿಕಾರಿ ಮತ್ತು ಸಹಾಯಕ ಪರಿಶೀಲನಾ ಅಧಿಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್‌) ಬಿಷಪ್ ಜಾನ್ಸನ್ ಕಾಲೇಜಿನ ಮಾಜಿ ಪ್ರಾಂಶುಪಾಲರನ್ನು ಬಂಧಿಸಿದೆ.

ADVERTISEMENT

ಬಂಧಿತ ಪ್ರಾಂಶುಪಾಲೆ ಪಾರುಲ್ ಸೊಲೊಮನ್‌ ಅವರ ಬಳಿಯಿದ್ದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಲೋಕಸೇವಾ ಆಯೋಗವು (ಯುಪಿಪಿಎಸ್‌ಸಿ) ಫೆಬ್ರುವರಿ 11ರಂದು ಪರೀಕ್ಷೆ ನಡೆಸಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಾರ್ಚ್ 2ರಂದು ಪರೀಕ್ಷೆಯನ್ನು ರದ್ದುಗೊಳಿಸಿತ್ತು.

ಪ್ರಕರಣ ಸಂಬಂಧ ಪ್ರಯಾಗ್‌ರಾಜ್‌ನಲ್ಲಿ ಪ್ರಿಂಟಿಂಗ್ ಪ್ರೆಸ್‌ನ ನೌಕರ ಸೇರಿದಂತೆ ಆರು ಮಂದಿಯನ್ನು ಜೂನ್‌ನಲ್ಲಿ ಎಸ್‌ಟಿಎಫ್ ಬಂಧಿಸಿತ್ತು.

ಭೋಪಾಲ್‌ನ ಸುನಿಲ್ ರಘುವಂಶಿ, ಪ್ರಿಂಟಿಂಗ್ ಪ್ರೆಸ್ ನೌಕರನಾದ ಬಿಹಾರದ ಮಧುಬನಿಯ ಸುಭಾಷ್‌ ಪ್ರಕಾಶ್, ಪ್ರಯಾಗ್‌ರಾಜ್‌ನ ವಿಶಾಲ್ ದುಬೆ ಮತ್ತು ಸಂದೀಪ್ ಪಾಂಡೆ, ಗಯಾದ ಅಮರ್‌ಜೀತ್ ಶರ್ಮಾ ಹಾಗೂ ಬಲ್ಲಿಯಾದ ವಿವೇಕ್ ಉಪಾಧ್ಯಾಯ ಬಂಧಿತರು. ಬಂಧಿತರಿಂದ ಒಂದು ಲ್ಯಾಪ್‌ಟಾಪ್, ಆರು ಮೊಬೈಲ್ ಫೋನ್‌ಗಳು, ಐದು ಖಾಲಿ ಚೆಕ್‌ಗಳನ್ನು ವಶ‍ಪಡಿಸಿಕೊಳ್ಳಲಾಗಿದೆ ಎಂದು ಎಸ್‌ಟಿಎಫ್‌ ತಿಳಿಸಿತ್ತು.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಲಾಗಿತ್ತು. ಬಂಧಿತರ ಪೈಕಿ ಸುನಿಲ್ ರಘುವಂಶಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದು, ಉಳಿದವರು ಆತನ ಸಹಪಾಠಿಗಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.