ADVERTISEMENT

ಅವಧೇಶ್ ರಾಯ್ ಹತ್ಯೆ ಪ್ರಕರಣ | ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2023, 7:36 IST
Last Updated 5 ಜೂನ್ 2023, 7:36 IST
   

ವಾರಾಣಸಿ: 1991ರ ಅವಧೇಶ್ ರಾಯ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಶಾಸಕ, ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ತಪ್ಪಿತಸ್ಥ ಎಂದು ವಾರಾಣಸಿಯ ಸಂಸದರು ಶಾಸಕರ ನ್ಯಾಯಾಲಯ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ.

ಆಗಸ್ಟ್ 3, 1991ರಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರಾಯ್ ಅವರ ಸಹೋದರ ಅವಧೇಶ್ ರಾಯ್ ಅವರನ್ನು ವಾರಾಣಸಿಯ ಅಜಯ್ ರಾವ್ ಮನೆ ಎದುರೇ ಗುಂಡಿಕ್ಕಿ ಕೊಲ್ಲಲಾಗಿತ್ತು.

ತೀರ್ಪಿನ ಕುರಿತಂತೆ ಪ್ರತಿಕ್ರಿಯಿಸಿರುವ ಅಜಯ್ ರಾಯ್, ’ಹಲವು ವರ್ಷಗಳ ನಮ್ಮ ಕಾಯುವಿಕೆ ಕೊನೆಗೊಂಡಿದೆ. ನಾನು, ನನ್ನ ಪೋಷಕರು ಮತ್ತು ಅವಧೇಶ್ ಮಗಳು ಸೇರಿದಂತೆ ಕುಟುಂಬದ ಸದಸ್ಯರೆಲ್ಲ ತಾಳ್ಮೆಯಿಂದ ಕಾದೆವು. ಹಲವು ಸರ್ಕಾರಗಳು ಬಂದವು ಹೋದವು. ಮುಖ್ತಾರ್ ಬಲಿಷ್ಠವಾಗುತ್ತಲೇ ಹೋದರು. ಆದರೆ, ನಾವು ಕೈಚೆಲ್ಲಿ ಕೂರಲಿಲ್ಲ. ನಮ್ಮ ವಕೀಲರು ಪರಿಶ್ರಮದಿಂದ ನ್ಯಾಯಾಲಯದಲ್ಲಿ ಮುಖ್ತಾರ್ ತಪ್ಪಿತಸ್ಥನೆಂದು ಸಾಬೀತುಮಾಡಿದ್ದಾರೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.