ADVERTISEMENT

ರಾಷ್ಟ್ರಪತಿ ಭೇಟಿ ವೇಳೆ ಸಂಚಾರ ಸ್ಥಗಿತ: ಅನಾರೋಗ್ಯಪೀಡಿತ ಮಹಿಳಾ ಉದ್ಯಮಿ ಸಾವು

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭೇಟಿ ವೇಳೆ ಸಂಚಾರ ಸ್ಥಗಿತ

ಸಂಜಯ ಪಾಂಡೆ
Published 26 ಜೂನ್ 2021, 18:21 IST
Last Updated 26 ಜೂನ್ 2021, 18:21 IST
ಪ್ರಾತಿನಿಧಿಕ ಚಿತ್ರ: ಪಿಟಿಐ
ಪ್ರಾತಿನಿಧಿಕ ಚಿತ್ರ: ಪಿಟಿಐ   

ಲಖನೌ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಕಾನ್ಪುರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ವಾಹನ ಸಂಚಾರ ತಡೆಹಿಡಿಯಲಾಗಿತ್ತು. ಈ ಸಂದರ್ಭದಲ್ಲಿ ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದ ವಾಹನದಲ್ಲಿದ್ದ, ಕೋವಿಡ್‌–19 ಸೋಂಕಿನ ನಂತರದ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳಾ ಉದ್ಯಮಿಯೊಬ್ಬರು ಮೃತಪಟ್ಟಿದ್ದಾರೆ.

ಭಾರತೀಯ ಕೈಗಾರಿಕಾ ಸಂಘದ (ಐಐಎ) ಮಹಿಳಾ ವಿಭಾಗದ ಪದಾಧಿಕಾರಿಯಾಗಿದ್ದ ವಂದನಾ ಮಿಶ್ರಾ ಎಂಬುವ ಮಹಿಳೆಯೇ ಮೃತಪಟ್ಟವರು. ವಂದನಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸಿದ ರಾಷ್ಟ್ರಪತಿ

ಕೋವಿಡ್‌ನಿಂದ ಇತ್ತೀಚೆಗೆ ಚೇತರಿಸಿಕೊಂಡಿದ್ದ ವಂದನಾ ಮಿಶ್ರಾ ಅವರು ಶುಕ್ರವಾರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕುಟುಂಬದವರು ಅವರನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ನಗರದ ಮೇಲುಸೇತುವೆಯಲ್ಲಿ ರಾಷ್ಟ್ರಪತಿಗಳಿದ್ದ ವಿಶೇಷ ರೈಲು ತೆರಳುತ್ತಿತ್ತು. ಆಗ ಗೋವಿಂದ್‌ ನಗರದ ಸಮೀಪ ವಾಹನ ಸಂಚಾರ ತಡೆಯಲಾಗಿತ್ತು. ಇಲ್ಲಿಯೇ ಮಹಿಳೆಯ ಕಾರು ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಆಸ್ಪತ್ರೆಗೆ ಹೋಗಬೇಕಾಗಿರುವುದರಿಂದ ವಾಹನ ಸಂಚರಿಸಲು ಅವಕಾಶ ನೀಡಬೇಕು ಎಂದು ಪೊಲೀಸರನ್ನು ಕೋರಿದೆವು. ಆದರೆ, ಭದ್ರತಾ ಕಾರಣ ನೀಡಿ ಅನುಮತಿ ನಿರಾಕರಿಸಲಾಯಿತು’ ಎಂದು ವಂದನಾ ಅವರ ಕುಟುಂಬದವರು ತಿಳಿಸಿದ್ದಾರೆ.

ಕ್ಷಮೆ ಕೇಳಿದ ಪೊಲೀಸ್‌ ಆಯುಕ್ತ: ಕಾನ್ಪುರ ಪೊಲೀಸ್ ಆಯುಕ್ತ ಅಸೀಮ್ ಅರುಣ್ ಅವರು ಶನಿವಾರ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಕುಟುಂಬದವರ ಕ್ಷಮೆಯಾಚಿಸಿದ್ದಾರೆ. ‘ಇದೊಂದು ದುರದೃಷ್ಟಕರ ಘಟನೆ. ಇದು ನಡೆಯಬಾರದಿತ್ತು. ಇಂಥ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.