ಡೆಹ್ರಾಡೂನ್: ಉತ್ತರಕಾಶಿಯಲ್ಲಿ ಮೊಕ್ಕಾಂ ಹೂಡಿ ಚಾರ್‌ಧಾಮ್ ಯಾತ್ರೆಯ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಕಾರ್ಯದರ್ಶಿಗೆ ಹೇಳಿದ್ದಾರೆ.
ಪ್ರಸಕ್ತ ವರ್ಷದ ಚಾರ್‌ಧಾಮ್ ಯಾತ್ರೆಗೆ ಅಭೂತಪೂರ್ವ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದಾರೆ. ಪವಿತ್ರ ಕ್ಷೇತ್ರಗಳಾದ ಗಂಗೋತ್ರಿ ಹಾಗೂ ಯಮುನೋತ್ರಿಯಲ್ಲೂ ನಿರೀಕ್ಷೆಗೂ ಮೀರಿದ ದಟ್ಟಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಧಾಮಿ ಅವರು ತಮ್ಮ ಕಾರ್ಯದರ್ಶಿ ಹಾಗೂ ಐಎಎಸ್ ಅಧಿಕಾರಿ ಆರ್. ಮೀನಾಕ್ಷಿ ಸುಂದರಂ ಅವರಿಗೆ ಭಕ್ತರ ನಿರ್ವಹಣೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ ಎಂಬುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚಾರ್‌ಧಾಮ್ ಮಹಾಪಂಚಾಯತ್ ಸದಸ್ಯ ಬ್ರಿಜೇಶ್ ಸಾತಿ ಮಾತನಾಡಿ, ‘ಚಾರ್‌ಧಾಮ್ ಯಾತ್ರೆಗೆ ಈ ಬಾರಿ ಭಕ್ತರು ಮತ್ತು ಯಾತ್ರಿಗಳಷ್ಟೇ ಬರುತ್ತಿಲ್ಲ. ಬದಲಿಗೆ ಯುಟ್ಯೂಬರ್ಸ್, ವ್ಲಾಗರ್ಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವವರೂ ಬರುತ್ತಿದ್ದಾರೆ. ಅವರಿಗೆ ದೇವರ ದರ್ಶನಕ್ಕಿಂತಲೂ ಮನರಂಜನೆ ಹಾಗೂ ಹಿಮಾಲಯದ ತಪ್ಪಲಿನ ದೇವಾಲಯಗಳ ಆಸಕ್ತಿದಾಯಕ ವಿಡಿಯೊಗಳನ್ನು ಚಿತ್ರೀಕರಣ ಮಾಡುವುದು ಮುಖ್ಯ ಉದ್ದೇಶವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.