ADVERTISEMENT

ಉತ್ತರಾಖಂಡ: 3ನೇ ಅಲೆಯಲ್ಲಿ ಕೋವಿಡ್‌ ಪೀಡಿತರ ಚಿಕಿತ್ಸೆಗೆ ಸಿಎಂ ನಿವಾಸವೂ ಸಜ್ಜು

ಪಿಟಿಐ
Published 24 ಜೂನ್ 2021, 14:42 IST
Last Updated 24 ಜೂನ್ 2021, 14:42 IST
ಸಿಎಂ ತೀರಥ್ ಸಿಂಗ್ ರಾವತ್
ಸಿಎಂ ತೀರಥ್ ಸಿಂಗ್ ರಾವತ್   

ಡೆಹ್ರಾಡೂನ್: ಕೋವಿಡ್‌ 3ನೇ ಅಲೆಯಲ್ಲಿ ಸೋಂಕುಪೀಡಿತರ ಚಿಕಿತ್ಸೆಗೆ ತಮ್ಮ ಅಧಿಕೃತ ನಿವಾಸವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಗುರುವಾರ ಹೇಳಿದರು.

‘ಮೂರನೇ ಅಲೆ ಎದುರಿಸಲು ಸಿದ್ಧತೆಯಲ್ಲಿ ಯಾವುದೇ ಕೊರತೆ ಆಗಿಲ್ಲ. ಈಗ ಸಾಕಷ್ಟು ಕೋವಿಡ್‌ ನಿಯೋಜಿತ ಆಸ್ಪತ್ರೆಗಳಿವೆ. ತಲಾ 500 ಹಾಸಿಗೆ ಸಾಮರ್ಥ್ಯದ ಎರಡು ಆಸ್ಪತ್ರೆಗಳನ್ನು ರಕ್ಷಣಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ನೆರವಿನಿಂದ ಹೃಷಿಕೇಶ ಮತ್ತು ಹಲ್‌ದ್ವಾನಿಯಲ್ಲಿ ಸಜ್ಜುಗೊಳಿಸಲಾಗಿದೆ’ ಎಂದು ಇಲ್ಲಿ ತಿಳಿಸಿದರು.

ಅಗತ್ಯಬಿದ್ದರೆ ಒಂದು ಅಥವಾ ಎರಡು ಹೋಟೆಲ್‌ಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲು ಆಗುವಂತೆ ಸಜ್ಜಾಗಿಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ADVERTISEMENT

ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ರಾಜ್ಯದಲ್ಲಿ ಸಿದ್ಧತೆಯ ಕೊರತೆ ಇದೆ ಎಂದು ಉತ್ತರಾಖಂಡ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.