ADVERTISEMENT

ಉತ್ತರಾಖಂಡ: ನದಿಗೆ ಉರುಳಿದ ಟೆಂಪೊ ಟ್ರಾವೆಲರ್‌, 10 ಮಂದಿ ಸಾವು

ಪಿಟಿಐ
Published 15 ಜೂನ್ 2024, 9:12 IST
Last Updated 15 ಜೂನ್ 2024, 9:12 IST
<div class="paragraphs"><p>ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಟೆಂಪೊ ಟ್ರಾವೆಲರ್‌ವೊಂದು ರಸ್ತೆಯಿಂದ ನದಿಗೆ ಉರುಳಿ ಬಿದ್ದಿದೆ</p></div>

ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಟೆಂಪೊ ಟ್ರಾವೆಲರ್‌ವೊಂದು ರಸ್ತೆಯಿಂದ ನದಿಗೆ ಉರುಳಿ ಬಿದ್ದಿದೆ

   

–ಎಕ್ಸ್‌ (ಟ್ವಿಟರ್) ಚಿತ್ರ

ರುದ್ರಪ್ರಯಾಗ: ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಟೆಂಪೊ ಟ್ರಾವೆಲರ್‌ವೊಂದು ರಸ್ತೆಯಿಂದ ಅಲಕಾನಂದ ನದಿಗೆ ಉರುಳಿಬಿದ್ದ ಪರಿಣಾಮ 10 ಪ್ರವಾಸಿಗರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ.

ADVERTISEMENT

‘ವಾಹನದಲ್ಲಿದ್ದ ಒಟ್ಟು 26 ‍ಪ್ರವಾಸಿಗರು ಬದರಿನಾಥ್‌ ರಾಷ್ಟ್ರೀಯ ಹೆದ್ದಾರಿ ಮೂಲಕ ಛೋಪ್ಟಾಗೆ ಪ್ರಯಾಣಿಸುತ್ತಿದ್ದರು. ಅವರಲ್ಲಿ ಬಹುಪಾಲು ಜನ ದೆಹಲಿ ಮೂಲದವರಾಗಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಗಂಭೀರವಾಗಿ ಗಾಯಗೊಂಡಿದ್ದ 7 ಜನರನ್ನು ಹೆಲಿ–ಆ್ಯಂಬುಲೆನ್ಸ್‌ ಮೂಲಕ ರಿಷಿಕೇಶದಲ್ಲಿರುವ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 6 ಮಂದಿಗೆ ರುದ್ರಪ್ರಯಾಗದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಶನಿವಾರ ಬೆಳಿಗ್ಗೆ 11 ಗಂಟೆಗೆ ಅಪಘಾತ ನಡೆದಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಬಸ್‌ ರಸ್ತೆಯಿಂದ 250 ಮೀಟರ್‌ ಆಳಕ್ಕೆ ಬಿದ್ದಿತ್ತು’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಆಧಿಕಾರಿ ನಂದನ್‌ ಸಿಂಗ್‌ ರಜ್ವಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.