ADVERTISEMENT

Uttarakhand Results: ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 9:32 IST
Last Updated 10 ಮಾರ್ಚ್ 2022, 9:32 IST
ಹರೀಶ್‌ ರಾವತ್‌
ಹರೀಶ್‌ ರಾವತ್‌   

ಕಾಶಿಪುರ (ಉತ್ತರಾಖಂಡ):ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರು 14 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

ಲಾಲ್‌ಕೌನ್‌ ವಿಧಾನಸಭಾ ಮತಕ್ಷೇತದಲ್ಲಿ ಹರೀಶ್‌ ರಾವತ್‌ ಅವರು ಬಿಜೆಪಿ ಅಭ್ಯರ್ಥಿ ಮೋಹನ್‌ ಬಿಶಾತ್‌ ವಿರುದ್ಧ ಸೋಲು ಕಂಡಿದ್ದಾರೆ.

ಹರೀಶ್‌ ರಾವತ್‌ ಅವರು 2014ರಿಂದ 2017ರವರೆಗೂ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು.

ADVERTISEMENT

ಉತ್ತರಾಖಂಡ ವಿಧಾನಸಭೆಯ 70 ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ, ರಾಷ್ಟ್ರೀಯ ಪಕ್ಷಜಿಜೆಪಿ ಬಹುಮತದತ್ತ ಸಾಗಿದೆ.

ಸದ್ಯ 48ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ 18ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, 4 ಕ್ಷೇತ್ರಗಳಲ್ಲಿಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಗಳಿಸಿದ್ದಾರೆ.

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಶೇ 4.64ರಷ್ಟು ಮತಗಳನ್ನು ಪಡೆದಿದೆ

ಉತ್ತರಾಖಂಡದಲ್ಲಿ ಫೆಬ್ರುವರಿ 14ರಂದು ಮತದಾನ ನಡೆದಿತ್ತು. ಉತ್ತರಾಖಂಡದಲ್ಲಿ ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ಚುನಾವಣೆಗೂ ಮುನ್ನಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು.50 ಶಾಸಕರ ಬೆಂಬಲದೊಂದಿಗೆ ಬಿಜೆಪಿಯ ಪುಷ್ಕರ್‌ ಸಿಂಗ್‌ ದಾಮಿ ಅವರು ಮುಖ್ಯಮಂತ್ರಿಯಾಗಿದ್ದರು.

ಯಾವ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ

ಎಬಿಪಿ ನ್ಯೂಸ್‌ – ಸಿವೋಟರ್‌
ಬಿಜೆಪಿ 26–32
ಕಾಂಗ್ರೆಸ್‌ 32–38
ಎಎಪಿ 0–2

ಇಟಿಜಿ ರಿಸರ್ಚ್‌
ಬಿಜೆಪಿ 37–40
ಕಾಂಗ್ರೆಸ್‌ 29–32
ಎಎಪಿ 0–1

ನ್ಯೂಸ್‌ 24
ಬಿಜೆಪಿ 43
ಕಾಂಗ್ರೆಸ್‌ 24
ಎಎಪಿ 0

ನ್ಯೂಸ್‌ಎಕ್ಸ್‌–ಪೋಲ್‌ಸ್ಟರ್‌
ಬಿಜೆಪಿ 31–33
ಕಾಂಗ್ರೆಸ್‌ 33–35
ಎಎಪಿ 0–3

ರಿಪಬ್ಲಿಕ್‌ ಟಿ.ವಿ
ಬಿಜೆಪಿ 35–39
ಕಾಂಗ್ರೆಸ್‌ 28–34
ಎಎಪಿ 0–3

ಟೈಮ್ಸ್‌ ನವ್‌ – ವಿಇಟಿಒ
ಬಿಜೆಪಿ 37
ಕಾಂಗ್ರೆಸ್‌ 31
ಎಎಪಿ 1

ಝೀ ನ್ಯೂಸ್‌– ಡಿಸೈನ್‌ಬಾಕ್ಸ್ಡ್‌
ಬಿಜೆಪಿ 26–30
ಕಾಂಗ್ರೆಸ್‌ 35–40
ಎಎಪಿ 0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.