ಲಂಡನ್: ಸಿಲ್ಕ್ಯಾರಾದಲ್ಲಿ ನಡೆದ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಜಾಗತಿಕ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಹಲವು ಜಾಗತಿಕ ಸುದ್ದಿ ವಾಹಿನಿಗಳು ಕಾರ್ಯಾಚರಣೆಯ ನೇರ ಪ್ರಸಾರಕ್ಕೆ ಪ್ರಾಮುಖ್ಯತೆ ನೀಡಿದ್ದವು.
ಬ್ರಿಟಿಷ್ ದೈನಿಕ ದ ಗಾರ್ಡಿಯನ್, ಸುಮಾರು 400 ಗಂಟೆ ಕಾರ್ಯಾಚರಣೆ ನಡೆದಿದ್ದು, ಹಲವು ತೊಡಕುಗಳು ಎದುರಾಗಿದ್ದವು ಎಂದು ಉಲ್ಲೇಖಿಸಿದೆ. ಮನುಷ್ಯನ ಶ್ರಮ, ಯಂತ್ರವನ್ನು ಮೀರಿಸಿತು. 12 ಮೀಟರ್ ಅಂತರ ಮನುಷ್ಯ ಶ್ರಮದಿಂದಲೇ ಸುರಂಗ ಕೊರೆಯಲಾಯಿತು ಎಂದು ಶ್ಲಾಘಿಸಿದೆ
ಸುರಂಗದಿಂದ ಮೊದಲ ಕಾರ್ಮಿಕ ಹೊರಬಂದ ಸಂದರ್ಭದಲ್ಲಿ ಹೊರಗೆ ದೊಡ್ಡ ಮಟ್ಟದ ಸಂಭ್ರಮ ಕಂಡುಬಂತು ಎಂದು ಬಿಬಿಸಿ ವರದಿ ಹೊಂದಿದೆ. ಸ್ಥಳದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಪುಷ್ಕರ ಧಾಮಿ, ಕೇಂದ್ರ ಸಚಿವ ವಿ.ಕೆ.ಸಿಂಗ್ ಕಾರ್ಮಿಕನ ಕುಶಲೋಪರಿ ವಿಚಾರಿಸುತ್ತಿದ್ದ ಚಿತ್ರವನ್ನು ಅದು ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.